ನಟ ಪ್ರವೀಣ್ ತೇಜ್ ಕಾರಿನ ಗಾಜನ್ನು ಪುಡಿಗೈದು ಹಲ್ಲೆ: ಕೊಲೆ ಬೆದರಿಕೆ
ಕೋಣಕುಂಟೆ: ಚೂರಿಕಟ್ಟೆ ಸೇರಿದಂತೆ ಕನ್ನಡದ ಅನೇಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಪ್ರವೀಣ್ ತೇಜ ಮೇಲೆ ಹಲ್ಲೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಮ್ಮ ಮೇಲೆ ದಿಲೀಪ್ ಎನ್ನುವವ ಹಲ್ಲೆ ಮಾಡಿ, ದುಬಾರಿ ಕಾರಿನ ಗಾಜನ್ನು ಪುಡಿ ಪುಡಿ ಮಾಡಿದ್ದಾನೆ. ಜೊತೆಗೆ ತಮ್ಮ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಪ್ರವೀಣ್ ಕೋಣನಕುಂಟೆ ಠಾಣೆಗೆ ದೂರು ನೀಡಿದ್ದಾರೆ.
ದಿಲೀಪ್ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.





