ಉಳ್ಳಾಲ ನಗರಸಭೆ ಬಜೆಟ್: ಕಿವಿಗೆ ಹೂವಿಟ್ಟು ಬಂದು ಕಾಂಗ್ರೆಸ್ ಅನ್ನು ಅಣಕಿಸಿದ ಜೆಡಿಎಸ್: ಮಾತಿನ ಚಕಮಕಿ, ತಳ್ಳಾಟ
ಉಳ್ಳಾಲ: ಉಳ್ಳಾಲ ನಗರಸಭೆಯ 2023-24 ನೇ ಸಾಲಿನ ಬಜೆಟ್ ಮಂಡನೆಯಾಗಿದ್ದು ಬಜೆಟ್ ಅನ್ನು ವಿರೋಧಿಸಿದ ಜೆಡಿಎಸ್ ಕೌನ್ಸಿಲರ್ ಗಳು ಕಿವಿಗೆ ಹೂವಿಟ್ಟು ಆಡಳಿತರೂಢ ಕಾಂಗ್ರೆಸನ್ನು ಅಣಕಿಸಿ ಮಾತಿನ ಚಕಮಕಿ ತಳ್ಳಾಟ ನಡೆದಿದೆ.
ಫೆಬ್ರವರಿ 17ರಂದು ನಡೆದ ರಾಜ್ಯ ಬಜೆಟ್ ಮಂಡನೆ ವೇಳೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಸದನದಲ್ಲಿ ಕಿವಿಗೆ ಹೂ ಇಟ್ಟು ಬಿಜೆಪಿ ಸರಕಾರವನ್ನ ಅಣಕಿಸಿದ್ದು, ಇದೀಗ ಕಾಂಗ್ರೆಸ್ ನ ಅಸ್ತ್ರವನ್ನೇ ಜೆಡಿಎಸ್ ನ ಉಳ್ಳಾಲ ನಗರಸದಸ್ಯರು ಬಳಸಿ ಆಡಳಿತರೂಢ ಕಾಂಗ್ರೆಸ್ ಅನ್ನು ಅಣಕಿಸಿದ್ದಾರೆ.
ಇಂದು ಉಳ್ಳಾಲ ನಗರಸಭೆ ಆಡಳಿತ ಸೌಧದಲ್ಲಿ ಬಜೆಟ್ ಮಂಡನೆ ವೇಳೆ ಜೆಡಿಎಸ್ ನ ಸದಸ್ಯರಾದ ದಿನಕರ ಉಳ್ಳಾಲ್, ಅಬ್ದುಲ್ ಬಶೀರ್ ,ಖಲೀಲ್,ಜಬ್ಬಾರ್ ,ಮುಶ್ತಾಕ್ ಪಟ್ಲ ಅವರು ಕಿವಿಗೆ ಹೂವಿಟ್ಟು ಬಜೆಟ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.




