ಫೆಬ್ರವರಿ 18ರಂದು ಹಳೆನೇರೆಂಕಿ ಆರಾಟಿಗೆ ವಲಿಯುಲ್ಲಾಹಿ ಮಖಾಂ ಉರೂಸ್: ಆಧ್ಯಾತ್ಮಿಕ ಮಜ್ಲಿಸುನ್ನೂರ್ 4ನೇ ವಾರ್ಷಿಕ ಕಾರ್ಯಕ್ರಮ
ಹಳೆನೇರೆಂಕಿ: ಚರಿತ್ರೆ ಪ್ರಸಿದ್ಧವಾದ ಹಳೆನೇರೆಂಕಿ ಆರಾಟಿಗೆ ವಲಿಯುಲ್ಲಾಹಿ ಮಖಾಂ ಉರೂಸ್ ಹಾಗೂ ಆಧ್ಯಾತ್ಮಿಕ ಮಜ್ಲಿಸುನ್ನೂರ್ ನಾಲ್ಕನೇ ವಾರ್ಷಿಕ ಕಾರ್ಯಕ್ರಮ ಫೆ.18ರಂದು ಶನಿವಾರ ಹಳೆನೇರಂಕಿ ದರ್ಗಾ ವಠಾರದಲ್ಲಿ ನಡೆಯಲಿದೆ.
ಬಹು| ಅಸ್ಸಯ್ಯಿದ್ ಶರಫುದ್ದೀನ್ ತಂಙಳ್ ಅಲ್‌ಹಾದಿ ತ್ವಬೀಬ್ ಸಾಲ್ಮರ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಲಿದ್ದು, ಇದರ ಪ್ರಯುಕ್ತ ಏಕದಿನ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮ ನಡೆಯಲಿದೆ. ಹಮೀದ್ ಫೈಝಿ ಕಿಲ್ಲೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಫೆ.18ರಂದು ಶನಿವಾರ ಅಸರ್ ನಮಾಜಿನ ಬಳಿಕ ಬಹು| ಮುಹಮ್ಮದ್ ರಫೀಖ್ ಅರ್ಶದಿ ಅವರಿಂದ ರಾತೀಬ್ ಮಜ್ಲಿಸ್ ನೇತೃತ್ವ ಹಾಗೂ ದುವಾಃಶೀರ್ವಚನ ನಡೆಯಲಿದೆ. ಮಗ್ರಿಬ್ ನಮಾಜಿನ ಬಳಿಕ ಆಧ್ಯಾತ್ಮಿಕ ಮಜ್ಲಿಸುನ್ನೂರ್ ಸಂಗಮ ನೇತೃತ್ವ ಹಾಗೂ ದುವಾಃಶೀರ್ವಚನ ಬಹು|ಅಸ್ಸಯ್ಯಿದ್ ಯಹ್ಯಾ ತಂಙಳ್ ಅಲ್‌ಹಾದಿ ಅವರಿಂದ ನಡೆಯಲಿದೆ.
ಇನ್ನು ರಾತ್ರಿ 8ಗಂಟೆಗೆ ಬಹು|ಅಸ್ಸಯ್ಯಿದ್ ಶರಫುದ್ದೀನ್ ತಂಙಳ್ ಅಲ್‌ಹಾದಿ ತ್ವಬೀಬ್ ಸಾಲ್ಮರ ಇವರು ಅಧ್ಯಕ್ಷೆತೆ ವಹಿಸಲಿದ್ದು, ಬಹು|ಮುಹಮ್ಮದ್ ರಫೀಖ್ ಅರ್ಶದಿ ಉದ್ಘಾಟನೆ ಮಾಡಲಿದ್ದು, ಜ. ಅಬ್ದುಲ್ ದಾರಿಮಿ ಹಳೆನೇರೆಂಕಿ ಆಗಮಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ಜ. ಇನಾಯತ್ ಅಲಿ, ಜ. ಸೈಫ್ ಮಲಕ್ಕಾರ್, ಜ. ಕೆ ಕೆ ಇಸ್ಮಾಯಿಲ್ ಹಾಜಿ ಕೋಲ್ಪೆ, ಜ. ಹಸನ್ ಸಜ್ಜಾದ್ ಭಾಗವಹಿಸಲಿದ್ದಾರೆ.




