➤➤ರಾಜ್ಯ ಬಜೆಟ್ 2023 UPDATES: ➤ ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಆರಂಭ ➤ ಸರ್ಕಾರಿ ಪದವಿ ಪೂರ್ವ, ಪದವಿ ಕಾಲೇಜುಗಳಿಗೆ ದಾಖಲಾಗುವವರಿಗೆ ಶುಲ್ಕ ವಿನಾಯಿತಿ.
ಬೆಂಗಳೂರು: 2023ನೇ ಸಾಲಿನ ರಾಜ್ಯ ಬಜೆಟ್‌ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಮಂಡಿಸುತ್ತಿದ್ದಾರೆ. ಇದರ ಮುಖ್ಯಾಂಶಗಳು ಇಲ್ಲಿವೆ.
ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಆರಂಭ. ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ದಾಖಲಾಗುವವರಿಗೆ ಶುಲ್ಕ ವಿನಾಯಿತಿ.
➤ ರೈತರಿಗೆ ತುರ್ತು ಸಂದರ್ಭದಲ್ಲಿ ಬೀಜ, ಗೊಬ್ಬರ ವಿತರಣೆಗೆ ₹10 ಸಾವಿರ ಕೋಟಿ ಅನುದಾನ
➤ ಸಣ್ವ, ಅತಿ ಸಣ್ಣ ರೈತರಿಗಾಗಿ ₹180 ಕೋಟಿ ವೆಚ್ಚದಲ್ಲಿ ಜೀವನ್ ಜ್ಯೋತಿ ಕಿಸಾನ್ ಯೋಜನೆ ಘೋಷಣೆ.
➤ ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಆರಂಭ. ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ದಾಖಲಾಗುವವರಿಗೆ ಶುಲ್ಕ ವಿನಾಯಿತಿ.
➤ ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆ. ತುರ್ತು ಸಂದರ್ಭದಲ್ಲಿ ರೈತರಿಗೆ ಬೀಜ, ಗೊಬ್ಬರ ವಿತರಣೆಗೆ ಸಾಧ್ಯವಾಗುತ್ತದೆ. ಇದಕ್ಕಾಗಿ ₹10 ಸಾವಿರ ಕೋಟಿ ಅನುದಾನ.
* ಸಣ್ವ, ಅತಿ ಸಣ್ಣ ರೈತರಿಗಾಗಿ ₹180 ಕೋಟಿ ವೆಚ್ಚದಲ್ಲಿ ಜೀವನ್ ಜ್ಯೋತಿ ಕಿಸಾನ್ ಯೋಜನೆ ಘೋಷಣೆ. ಮೀನಗಾರರ ಸುರಕ್ಷತೆಗಾಗಿ ₹ 17 ಕೋಟಿ ಅನುದಾನದಲ್ಲಿ ಬೋಟ್‌ಗಳಲ್ಲಿ ಜಿಪಿಎಸ್ ಅಳವಡಿಕೆ
➤ ಪ್ರಾಣಿ ಕಲ್ಯಾಣಕ್ಕಾಗಿ ಪ್ರಾಣಿ ಕಲ್ಯಾಣ ಮಂಡಳಿಗೆ ₹ 5 ಕೋಟಿ ಅನುದಾನ ಹಾಗೂ ಸಂಚಾರಿ ಪ್ರಾಣಿ ಚಿಕಿತ್ಸೆ ಕೇಂದ್ರ ಸ್ಥಾಪನೆ
➤ ಬಳ್ಳಾರಿಯಲ್ಲಿ ಮೆಘಾ ಡೈರಿ ಸ್ಥಾಪನೆಗೆ ₹ 100 ಕೋಟಿ ಅನುದಾನ
➤ ಅಡಿಕೆ ಬೆಳೆ ರೋಗ ನಿಯಂತ್ರಣಕ್ಕೆ ನೂತನ ತಂತ್ರಜ್ಞಾನ ಅಭಿವೃದ್ಧಿಗೆ ತೀರ್ಥಹಳ್ಳಿ ಕೃಷಿ ಕೇಂದ್ರಕ್ಕೆ ₹ 10 ಕೋಟಿ ಅನುದಾನ
➤ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ಯೋಜನೆ
➤ ಮಹಿಳಾ ಸಂಘಟಿತ ಕಾರ್ಮಿಕರಿಗೂ ಉಚಿತ ಬಸ್ ಪಾಸ್
➤ ನೇತಾರ ಸಮ್ಮಾನ ಯೋಜನೆಯಡಿ ಸಹಾಯಧನ 3 ಸಾವಿರ ರೂಪಾಯಿಯಿಂದ 5 ಸಾವಿರಕ್ಕೆ ಏರಿಕೆ.
➤ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆ
➤ಗೃಹಿಣಿಯರಿಗೆ ತಿಂಗಳಿಗೆ ₹ 500 ಸಹಾಯ ಧನ
➤ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
➤ ರೈತರಿಗೆ ₹5 ಲಕ್ಷ ರೂಪಾಯಿವರೆಗಿನ ಬಡ್ಡಿ ರಹಿತ ಸಾಲ




