March 20, 2026

ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡ ಕಾಂಗ್ರಸ್ ನ‌ “ಪ್ರಜಾಧ್ವನಿ” ಯಾತ್ರೆಯ ಬಸ್

0
image_editor_output_image-1921983845-1676438767832.jpg

ನೆಲಮಂಗಲ: ಕಾಂಗ್ರೆಸ್ ತಮ್ಮ ಪಕ್ಷದ ಪ್ರಣಾಳಿಕೆಯನ್ನ ಜನರ ಬಳಿ ತಲುಪಿಸಲು ಪ್ರಜಾಧ್ವನಿ ಬಸ್ ಯಾತ್ರೆಯ ಮೂಲಕ ಮುಂದಾಗಿದ್ದು, ಇದೀಗ ಈ ಬಸ್ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡು ಜನರ ಅಚ್ಚರಿಗೆ ಕಾರಣವಾಗಿದೆ.

ಬೆಂಗಳೂರು ಹೊರವಲಯ ನೆಲಮಂಗಲ ನಗರದ ಕುಣಿಗಲ್ ಬೈಪಾಸ್‍ನ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಗೆ ಬಸ್ ಆಗಮಿಸಿದೆ. ಈ ಬಸ್ ಬಂದ ವೇಳೆ ಕೆಲಕಾಲ ಮದುವೆ ಮನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ಸೇರಿದಂತೆ ನಾಯಕರು ಬಂದ್ರಾ ಎಂದು ಜನರು ಜೋಶ್ ನಲ್ಲಿದ್ದರು ಎನ್ನಲಾಗಿದೆ.

ಕಾಂಗ್ರೆಸ್ ಒಂದು ತಿಂಗಳ ಹಿಂದೆ ಚಾಲನೆ ನೀಡಿದ್ದ ಪ್ರಜಾಧ್ವನಿಯ ಕೆಎ 02 ಎಜಿ 0855 ಬಸ್ ಬಾಡಿಗೆಗೆ ಬಂದಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಚ್ಚರಿಗೆ ಕಾರಣವಾಗಿದೆ.

ಮದುವೆಗೆ ಕಾಂಗ್ರೆಸ್ ಪಕ್ಷದ ನಾಯಕರು ಬಂದ್ರಾ ಎಂಬ ಸಂಶಯದಲ್ಲಿ ಯಾರು ಕೂಡ ಇರಲ್ಲಿಲ್ಲ. ಈ ಬಸ್ ಮದುವೆ ದಿಬ್ಬಣಕ್ಕೆ ಹಾಜರಾಗಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!