ಪುತ್ತೂರು: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಗ್ರಾ.ಪಂ ಸದಸ್ಯ ಮೃತ್ಯು
ಪುತ್ತೂರು : ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಾರು ಚಾಲಕರಾಗಿದ್ದ ಪಂಚಾಯಿತಿ ಸದಸ್ಯರೊಬ್ಬರು ಮೃತ ಪಟ್ಟ ದಾರುಣ ಘಟನೆ ಪತ್ತೂರು ತಾಲ್ಲೂಕಿನ ಸಂಟ್ಯಾರು ಸಮೀಪ ಮಂಗಳವಾರ ರಾತ್ರಿ ಸಂಭವಿಸಿದೆ.
ನಿಡ್ಪಳ್ಳಿ ಗ್ರಾಮದ ಮಂಡೂರು ನಿವಾಸಿ ನಿಡುಪಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮುರಳಿ ಭಟ್ ಮೃತ ಪಟ್ಟವರು.
ಮುರಳಿ ಭಟ್ ಅವರು ಮಂಗಳವಾರ ರಾತ್ರಿ ಪುತ್ತೂರಿನಿಂದ ಮನೆಯ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಸಂಟ್ಯಾರು ಸಮೀಪ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವುದಾಗಿ ತಿಳಿದು ಬಂದಿದೆ. ಮುರಳಿ ಭಟ್ ಅವರು ಮೃತ ಪಟ್ಟಿದ್ದು ಕಾರಿನಲ್ಲಿದ್ದ ಇತರ ಮೂವರು ಗಾಯಗೊಂಡಿದ್ದಾರೆ. ಮುರಳಿ ಭಟ್ ಅವಿವಾಹಿತರೆಂದು ತಿಳಿದು ಬಂದಿದೆ



