ಬಂಟ್ವಾಳ: ನ್ಯಾಯಾಲಯಕ್ಕೆ ಹಾಜರಾಗದೆ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್
ಬಂಟ್ವಾಳ: ವಾರೆಂಟ್ ಜಾರಿಯಾಗಿ 2 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬಂಟ್ಆಳದಲ್ಲಿ ನಡೆದಿದೆ.
ಬಂಟ್ವಾಳ ಗ್ರಾಮಾಂತರ ಠಾಣೆಯ ಅ ಕ್ರ 05/2020 ಕಲಂ 341,324,504 ನೇದರಲ್ಲಿ ಆರೋಪಿಯಾದ ಮಿತ್ತ ಪಡ್ಪು ಮನೆ ಸಜಿಪನಡು ಗ್ರಾಮದ ಅಫ್ರೀದಿ ಎಂಬಾತ ವಾರೆಂಟ್ ಜಾರಿಯಾಗಿ ಸುಮಾರು 2 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೂ ಹಾಜರಾಗದೆ ತಲೆ ಮರೆಸಿಕೊಂಡಿದ್ದ.
ಇನ್ನು ಆರೋಪಿ ಅಫ್ರೀದಿನನ್ನು ಇಂದು ಬೆಳಿಗ್ಗೆ ದಸ್ತಗಿರಿ ಮಾಡಲಾಗಿದ್ದು, ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.




