February 4, 2026

ವಿಟ್ಲ: ಬಿಜೆಪಿ, ಆರ್‌ಎಸ್‌ಎಸ್ ಮುಖಂಡನ ಸಂಬಂಧಿ ಸಹಿತ ಹಲವು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

0
IMG-20230213-WA0027.jpg

ವಿಟ್ಲ: ಪುತ್ತೂರು ಬಿಜೆಪಿಯಲ್ಲಿ ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ವಿಟ್ಲದ ಹಲವು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಮುಖಂಡೆ ದಿವ್ಯ ಪ್ರಭಾ ಚಿಲ್ತಡ್ಕ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ ರವರು ಪ್ರತಿನಿಧಿಸುವ 11ನೇ ವಾರ್ಡಿನ ಅಧ್ಯಕ್ಷ ಮೋಹನ್ ಕಟ್ಟೆ ಅವರು ಕಾಂಗ್ರೆಸ್ ಪಕ್ಷದ ಸೇರಿದ ಪ್ರಮುಖರಾಗಿದ್ದು, ಅವರ ಸಹೋದರ ಪದ್ಮನಾಭ ಕಟ್ಟೆ ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ.

ವಿಟ್ಲ ತಾಲೂಕು ಆರ್.ಎಸ್. ಎಸ್ ಜವಾಬ್ದಾರಿ ಹೊಂದಿರುವ ಪ್ರಮುಖನ ತೀರಾ ಹತ್ತಿರದ ಸಂಬಂಧಿ ಯೋಗಿಶ್ ಗೌಡ ದೇವಸ್ಯ,, ರಾಜೇಶ್, ಮಹಾಬಲ, ವರದರಾಜ್ ಕೊಟ್ಟಾರಿ, ಸಹಿತ ಹಲವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್ ಮುಖಂಡೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ಉಪಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.

ಇವರೆಲ್ಲ ವಿಟ್ಲದ ಬಿಜೆಪಿ ಮುಖಂಡರ ವರ್ತನೆಯಿಂದ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.‌ಇತ್ತೀಚೆಗೆ ಪುತ್ತೂರು ಶಾಸಕ ಸಜೀವ ಮಠಂದೂರು‌ ಮತ್ತು ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರ ನಡುವೆ ಭಾರೀ ವಿವಾದ ಉಂಟಾಗಿತ್ತು.‌ ಅದರ ಬೆನ್ನೆಲ್ಲೇ ಪುತ್ತೂರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಬಿಜೆಪಿಗೆ ಮತ್ತೊಂದು ಆಘಾತ ಉಂಟು ಮಾಡಿದೆ.

ವಿಟ್ಲ ಬಿಜೆಪಿಯ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಮುಖಂಡೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ಉಪಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಅಮಿತ್ ಷಾ ಪುತ್ತೂರಿಗೆ ಭೇಟಿ ನೀಡಿದ ಬೆನ್ನಲ್ಲೆ ಪುತ್ತೂರು ಬಿಜೆಪಿಗೆ ಭಾರೀ ಹಿನ್ನೆಡೆಯಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ವ್ಯಂಗ್ಯ ಮಾಡಿದ್ದಾರೆ.

ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರದ ಅರುಣ್ ವಿಟ್ಲ ರವರು ಪ್ರತಿನಿಧಿಸುವ 11ನೇ ವಾರ್ಡಿನ ಅಧ್ಯಕ್ಷ ಮೋಹನ್ ಕಟ್ಟೆ ಅವರು ಕಾಂಗ್ರೆಸ್ ಪಕ್ಷದ ಸೇರಿದ ಪ್ರಮುಖರು, ಇವರ ಸಹೋದರ ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರೂ ಕೂಡ ಆಗಿದ್ದಾರೆ. ಅಲ್ಲದೇ ವಿಟ್ಲ ತಾಲೂಕು ಆರ್.ಎಸ್. ಎಸ್ ಜವಾಬ್ದಾರಿ ಹೊಂದಿರುವ ಪ್ರಮುಖರ ತೀರಾ ಹತ್ತಿರದ ಸಂಬಂಧಿ ಯೋಗಿಶ್ ಗೌಡ ದೇವಸ್ಯ ಸೇರಿದಂತೆ ರಾಜೇಶ್, ಮಹಾಬಲ, ವರದರಾಜ್ ಕೊಟ್ಟಾರಿ ಸಹಿತ ಹಲವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.

ಈಗಾಗಲೇ ಭಿನ್ನಮತದಿಂದ ತತ್ತರಿಸಿದೆ ಎನ್ನಲಾಗುತ್ತಿರುವ ವಿಟ್ಲ ಬಿಜೆಪಿಗೆ ಇದು ಆಘಾತವನ್ನು ನೀಡಿದೆ. ಇನ್ನೂ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದಿವ್ಯಾ ಪ್ರಭಾ ಅವರು ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಸೇರ್ಪಡೆಗೊಳಿಸುವ ಮೂಲಕ ಬಿಜೆಪಿ ಪಕ್ಷದಲ್ಲಿ ಅಲ್ಲೋಕಲ್ಲೋಲ ಸೃಷ್ಟಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *

You may have missed

error: Content is protected !!