February 1, 2026

ಫೆ: 18 ಮಿಹ್ರಾಜ್ ಮಜ್ಲಿಸ್:
ವಿಟ್ಲ ವಲಯ ಮಟ್ಟದ ದಾರಿಮೀಸ್ ಕಾರ್ಯಕರ್ತರ ಸಮಾವೇಶ

0
IMG-20230210-WA0020.jpg

ವಿಟ್ಲ: ಫೆ, 18 ರಂದು ಮಾಣಿ ಜನಪ್ರಿಯ ಗಾರ್ಡನ್ ನಲ್ಲಿ ಆಯೋಜಿಸಿದ ಬೃಹತ್ ಸುನ್ನೀ ಸಮಾವೇಶ ಮತ್ತು ಶಬೇ ಮಿಹ್ರಾಜ್ ಮಜ್ಲಿಸ್ ನ ಪ್ರಚಾರ ಸಭೆಯು ವಿಟ್ಲ ವಲಯ ದಾರಿಮೀಸ್ ವತಿಯಿಂದ ವಿಟ್ಲ ಮಸೀದಿಯ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷ ತೆ ಯನ್ನು ದಾರಿಮೀಸ್ ಜಿಲ್ಲಾಧ್ಯಕ್ಷ ಕೆ.ಬಿ ಅಬ್ದುಲ್ ಕಾದರ್ ದಾರಿಮಿ ವಹಿಸಿದರು.

ವಿಟ್ಲ ಕೇಂದ್ರ ಮಸೀದಿಯ ಮುದರ್ರಿಸ್ ನಷೀಹ್ ದಾರಿಮಿ ದುವಾ ಕ್ಕೆ ನೇತೃತ್ವ ನೀಡಿದರು. ರಾಜ್ಯ ದಾರಿಮೀಸ್ ಪ್ರಚಾರ ಸಮಿತಿಯ ಕಾರ್ಯದರ್ಶಿ ಕೆ.ಎಲ್ ಉಮರ್ ದಾರಿಮಿ ಸಭೆಯನ್ನು ಉದ್ಘಾಟಿಸಿದರು.

ಸಮಾವೇಶ ದ ಪೋಸ್ಟರ್ ವಿಟ್ಲ ಕೇಂದ್ರ ಜುಮಾ ಮಸೀದಿಯ ಅದ್ಯಕ್ಷರಾದ ಇಖ್ಬಾಲ್ ಶೀತಲ್, ಕಾರ್ಯದರ್ಶಿ ಹಮೀದ್ ಹಾಜಿ ಕೊರಂಗಿಲ ಬಿಡುಗಡೆಗೊಳಿಸಿದರು.

ಸಭೆಯಲ್ಲಿ ಉಸ್ತಾದ್ ನಷೀಹ್ ದಾರಿಮಿ, ಉಮ್ಮರ್ ದಾರಿಮಿ ಪರ್ತಿಪ್ಪಾಡಿ, ಗಫೂರ್ ಹನೀಫಿ ಕೊಡುಂಗಾಯಿ, ಇಸ್ಮಾಯಿಲ್ ಹನೀಫಿ, ಹಕೀಂ ಅರ್ಶದಿ ಭಾಷಣ ಮಾಡಿದರು. ದಾರಿಮೀಸ್ ಮುಖಂಡ ಹನೀಫ್ ದಾರಿಮಿ ಸವಣೂರು ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!