February 2, 2026

ಸುಳ್ಯದಲ್ಲೊಂದು ಜರ್ಮನ್ ಶೈಲಿಯ ಅಲ್ಲಾಹನ ಭವನ: ಫೆ. 12 ರಂದು ಮಸ್ಜಿದ್ ಹಾಜಿರಾ ಹಸನ್ ಉದ್ಘಾಟನೆ

0
IMG-20230210-WA0019.jpg

ನಾವು ಸಾಧಾರಣವಾಗಿ ಮಸೀದಿ ಕಟ್ಟಡಗಳನ್ನು ಎಲ್ಲೆಡೆ ನೋಡುತ್ತೇವೆ. ಮಿನಾರ, ಒಳಾಂಗಣದ ವೈಶಿಷ್ಟ್ಯತೆಗಳನ್ನೂ ಕಾಣುತ್ತೇವೆ. ಆದರೆ ಸುಳ್ಯದಲ್ಲೊಂದು ವಿಶಿಷ್ಟ ಆಕಾರದ ಮಸೀದಿಯೊಂದು ತಲೆ ಎತ್ತಿ ನಿಂತಿದೆ. ಅದುವೇ “ಮಸ್ಜಿದ್ ಹಾಜಿರಾ ಹಸನ್” ಮತ್ತು “ಸುಳ್ಯ ಕಮ್ಯುನಿಟಿ ಸೆಂಟರ್”.

ಇದು ಅಂತಿಂಥ ಕಟ್ಟಡವಲ್ಲ. ಬಹಳಷ್ಟು ಅಂದವಾಗಿ, ಆಕರ್ಷಕ ಮತ್ತು ವೈಶಿಷ್ಟ್ಯಪೂರ್ಣವಾಗಿ ಜರ್ಮನ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಯೂನುಸ್ ಹಸನ್ ಅವರು ಸೌದಿ ಅರೇಬಿಯಾದ ಅಲ್ ಕೋಬರ್ ನಲ್ಲಿ ಉದ್ಯಮಿ. ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ಎನ್ನಾರೈ ಟ್ರಸ್ಟಿ. ಯಾವುದೇ ಪ್ರಚಾರ, ಪ್ರತಿಫಲ ಬಯಸದೇ ಸದಾ ಅಶಕ್ತರಿಗೆ ಮಿಡಿಯುವ ವ್ಯಕ್ತಿತ್ವ ಅವರದ್ದು. ಅವರು ತನ್ನ ತಾಯಿ ಹಾಜಿರಾ ಹಸನ್ ಅವರ ಹೆಸರಲ್ಲಿ ಸುಳ್ಯದಲ್ಲೊಂದು ಅಲ್ಲಾಹನ ಭವನ ನಿರ್ಮಿಸಿ 2023 ಫೆಬ್ರವರಿ 12 ಭಾನುವಾರ ಬೆಳಗ್ಗೆ 09:30ಕ್ಕೆ ಸತ್ಯ ವಿಶ್ವಾಸಿಗಳಿಗೆ ಬಿಟ್ಟುಕೊಡುತ್ತಿರುವುದು ಶ್ಲಾಘನಾರ್ಹ ಸೇವೆ. ಯೂನುಸ್ ಅವರು ಪ್ರಚಾರ ಬಯಸುವ ವ್ಯಕ್ತಿಯಲ್ಲ. ಬಹುಶಃ ಈ ಬರಹ ಕೂಡಾ ಅವರ ಅನುಮತಿ ಇಲ್ಲದೇ ಅಭಿಮಾನದಿಂದ ಬರೆದಿರುವೆನು. ಸುಳ್ಯ ಪರಿಸರಕ್ಕೆ ಸುಂದರ ಶೈಲಿಯ ಮಸೀದಿ ನಿರ್ಮಿಸಿಕೊಟ್ಟು ಮಾದರಿಯಾದ ಸ್ನೇಹಿತ ಯೂನುಸ್ ಹಸನ್ ಅವರ ಬಲುದೊಡ್ಡ ಸೇವೆಯನ್ನು ಅಲ್ಲಾಹನು ಸ್ವೀಕರಿಸಲಿ.
-ರಶೀದ್ ವಿಟ್ಲ.

Leave a Reply

Your email address will not be published. Required fields are marked *

error: Content is protected !!