August 13, 2026

ಕಬಡ್ಡಿ ಆಡುತ್ತಿದ್ದ ವೇಳೆ ಹೃದಯಾಘಾತ: ವಿದ್ಯಾರ್ಥಿನಿ ಮೃತ್ಯು

0
image_editor_output_image-712101523-1675918095036.jpg

ಬೆಂಗಳೂರು: ಕಬಡ್ಡಿ ಆಡುತ್ತಿದ್ದ ವೇಳೆ ಹೃದಯಾಘಾತವಾಗಿ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯ ಖಾಸಗಿ ಕಾಲೇಜಿನಲ್ಲಿ ನಡೆದಿದೆ.

ಧಾರವಾಡ ಮೂಲದ ವಿದ್ಯಾರ್ಥಿನಿ ಸಂಗೀತಾ(17) ಮೃತ ವಿದ್ಯಾರ್ಥಿನಿ.

ಸಂಗೀತಾ ಪ್ರಥಮ ಪಿಯು ತಂಡದಲ್ಲಿ ಆಡುತ್ತಿದ್ದರು. ಕಬಡ್ಡಿ ಆಡುತ್ತಿರುವಾಗಲೇ ಕುಸಿದುಬಿದ್ದ ಸಂಗೀತಾಳನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಂಗೀತಾ ಮೃತಪಟ್ಟಿದ್ದರು

ಅತ್ತಿಬೆಲೆಯ ಸೈಂಟ್ ಫಿಲೋಮಿನಾ ಶಾಲೆಯಲ್ಲಿ ಘಟನೆ ನಡೆದಿದೆ. ತಕ್ಷಣ ಅವರನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!