ಬೆಳ್ತಂಗಡಿ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಬೆಳ್ತಂಗಡಿ: ಪ್ರಕರಣ ಸಂಬಂಧ ಆರೋಪಿಯಾಗಿ ಕಳೆದೊಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಬೆಳ್ತಂಗಡಿ ಠಾಣೆ ಪೊಲೀಸರು ಇದೀಗ ದಸ್ತಗಿರಿ ಮಾಡಿದ್ದಾರೆ.
ಕಾಸರಗೋಡು ಉಪ್ಪಳದ ಮೊಳಿಂಜೆ ಮಾಹಿನಗರ ಫಾತಿಮಾ ಮಂಜಿಲ್ ನಿವಾಸಿ ಸಿರಾಜ್ ಬಂಧಿತ ಆರೋಪಿ.
ಪ್ರಕರಣದಲ್ಲಿ ಆರೋಪಿಯಾಗಿದ್ದಈತ ಕಳೆದೊಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಈತನ ವಿರುದ್ದ ವಾರಂಟ್ ಜಾರಿಯಾಗಿತ್ತು.




