ವಿಟ್ಲ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು
ವಿಟ್ಲ: ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಕಾನತ್ತಡ್ಕದಲ್ಲಿ ನಡೆದಿದೆ.



ವಿಟ್ಲ ಕಾನತ್ತಡ್ಕ ಶಾಲೆಯ ಸಮೀಪದ ರಹೀಮ್ ಶಾನ್ ಅವರ ಮನೆಯಲ್ಲಿ ಕುಟುಂಬ ಸದಸ್ಯರು ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು.
ರಾತ್ರಿ ಗಂಟೆ 8 ರಿಂದ 11 ಗಂಟೆಯ ಒಳಗಾಗಿ ಮನೆಗೆ ನುಗ್ಗಿ ಸುಮಾರು ಹದಿನೈದು ಪವನ್ ಚಿನ್ನ ಹಾಗೂ ಒಂದು ಲಕ್ಷ ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮನೆಮಂದಿ ರಾತ್ರಿ 12 ಗಂಟೆಗೆ ಬಂದಾಗ ಹಿಂಬದಿಯ ಬಾಗಿಲು ಮುರಿಯಲಾಗಿದ್ದು, ಕಳವು ನಡೆದ ಬಗ್ಗೆ ಬೆಳಕಿಗೆ ಬಂದಿದೆ.
ವಿಟ್ಲ ಪೋಲಿಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.





