ಬಿಜೆಪಿ ಮುಖಂಡನ ಬರ್ಬರವಾಗಿ ಕೊಲೆ
ಬಿಜಾಪುರ: ಛತ್ತೀಸ್ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಬಿಜಾಪುರ ಜಿಲ್ಲೆಯಲ್ಲಿ ಕುಟುಂಬಸ್ಥರ ಮುಂದೆಯೇ ಬಿಜೆಪಿ ಮುಖಂಡರೊಬ್ಬರನ್ನು ನಕ್ಸಲರು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಹತ್ಯೆಯಾದವರನ್ನು ನೀಲಕಂಠ ಕಕ್ಕೆಂ ಎಂದು ಗುರುತಿಸಲಾಗಿದ್ದು, ಇಲ್ಲಿನ ಉಸುರ್ ಮಂಡಲದ ಬಿಜೆಪಿ ಅಧ್ಯಕ್ಷರಾಗಿದ್ದರು. ಅಲ್ಲದೇ, ಈ ಘಟನೆ ನಂತರ ಕರಪತ್ರ ಎಸೆದಿರುವ ನಕ್ಸಲರು ಹತ್ಯೆಯ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ.
ಕಳೆದ 15 ವರ್ಷಗಳಿಂದ ಉಸುರ್ ಮಂಡಲದ ಬಿಜೆಪಿ ಅಧ್ಯಕ್ಷರಾಗಿ ನೀಲಕಂಠ ಕಕ್ಕೆಂ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ತಮ್ಮ ನಾದಿನಿ ಮದುವೆ ಸಮಾರಂಭಕ್ಕೆಂದು ಸ್ವಗ್ರಾಮ ಆವಪಲ್ಲಿ ಗ್ರಾಮಕ್ಕೆ ತೆರಳಿದ್ದರು.
ಈ ವೇಳೆ ನಕ್ಸಲರು ಬಂದು ನೀಲಕಂಠ ಕಕ್ಕೆಂ ಮೇಲೆ ದಾಳಿ ಮಾಡಿದ್ದಾರೆ. ಕುಟುಂಬದವರ ಎದುರೇ ನೀಲಕಂಠ ಕಕ್ಕೆಂ ಅವರ ತಲೆಯನ್ನು ಕಡಿದು ನಕ್ಸಲರು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.





