February 2, 2026

ಫುಟ್ಬಾಲ್ ನಲ್ಲಿ ಗಿನ್ನಿಸ್ ದಾಖಲೆ ಬರೆದ ಮಂಗಳೂರಿನ ಮೊಹಮ್ಮದ್ ಶಲೀಲ್

0
n4675947501675485469534ff9620653e181c8bf6b5d2e11c088d989e82ccae28196e760db6b4152bb972fb.jpg

ಮಂಗಳೂರು: ಫುಟ್ಬಾಲ್ ನಲ್ಲಿ ಗಿನ್ನಿಸ್ ದಾಖಲೆ ಬರೆದ ಮಂಗಳೂರಿನ ದೇರಳಕಟ್ಟೆಯ ಯುವಕ ಇಡೀ ಕರಾವಳಿಗರೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ.

ದೇರಳಕಟ್ಟೆಯ ಯುವಕ ಮೊಹಮ್ಮದ್ ಶಲೀಲ್ ಫುಟ್ಬಾಲ್‌ನಲ್ಲಿ ಗಿನ್ನೆಸ್‌ ನ ವಿಶ್ವದ ಇಬ್ಬರ ದಾಖಲೆ ಮುರಿದು ತನ್ನದೇ ಆದ ಹೊಸ ದಾಖಲೆ ಬರೆದು ಎಲ್ಲರ ಹುಬ್ಬೇರಿಸಿದ್ದಾರೆ.

ಬೆಳ್ಮ ದೇರಳಕಟ್ಟೆ ನಿವಾಸಿ ಮೊಹಮ್ಮದ್ ಶಲೀಲ್ ಕೇವಲ 30 ಸೆಕೆಂಡುಗಳಲ್ಲಿ ಫುಟ್ಬಾಲ್‌ನೊಂದಿಗೆ 10 ರೌಂಡ್‌ಗಳ ನಟ್ ಮೆಗ್ ಸಾಧಿಸುವ ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದಾರೆ‌.

2017ರಲ್ಲಿ ಇಂಗ್ಲೆಂಡ್ ನ ಡೆಲೆ ಅಲ್ಲಿ ಎಂಬವರು 30 ಸೆಕೆಂಡುಗಳಲ್ಲಿ 7 ಸುತ್ತುಗಳನ್ನು ಸಾಧಿಸುವ ಮೂಲಕ ಮೊದಲ ಗಿನ್ನೆಸ್ ದಾಖಲೆ ಸಾಧಿಸಿದ್ದರು. 2021ರ ಫೆಬ್ರವರಿಯಲ್ಲಿ ಮಹಿಳಾ ಪುಟ್ಬಾಲ್ ಆಟಗಾರ್ತಿ ಅಮೆರಿಕಾ ಕ್ಯಾಲಿಫೋರ್ನಿಯಾದ ವೆಸ್ಟ್ ಲೇಕ್ ಹಳ್ಳಿಯ ತಾಷಾ ನಿಕೋಲ್ ತೇರಾನಿ ಒಂದು ನಿಮಿಷದಲ್ಲಿ 18 ಸುತ್ತುಗಳನ್ನು ಹೊಡೆಯುವ ಮೂಲಕ ಗಿನ್ನೆಸ್ ದಾಖಲೆ ಸಾಧಿಸಿದ್ದರು.

Leave a Reply

Your email address will not be published. Required fields are marked *

error: Content is protected !!