ಸಾನ್ಯಾ ಅಯ್ಯರ್ ಕಿರುಕುಳ ವಿಚಾರ: ದೇವರ ಮೊರೆ ಹೋದ ಪುತ್ತೂರು ಕಂಬಳ ಸಮಿತಿ

ಪುತ್ತೂರು: ಕಿರುತೆರೆ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಸಾನ್ಯಾ ಇತ್ತೀಚೆಗಷ್ಟೇ ಪುತ್ತೂರಿನಲ್ಲಿ ನಡೆದ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳಕ್ಕೆ ಅತಿಥಿಯಾಗಿ ಭಾಗಿಯಾಗಿದ್ದರು.
ಈ ವೇಳೆ ಕುಡಿದ ಮತ್ತಿನಲ್ಲಿದ್ದ ಯುವಕನೊಬ್ಬ ತಮಗೆ ತೊಂದರೆ ನೀಡಿದ ಎನ್ನುವ ಕಾರಣಕ್ಕಾಗಿ ಆಯೋಜಕರ ಮೇಲೆ ಗರಂ ಆಗಿದ್ದರು. ಸಾನ್ಯಾ ಮತ್ತು ಸ್ನೇಹಿತರು ಆಯೋಜಕರನ್ನು ತರಾಟೆಗೆ ತಗೆದುಕೊಂಡ ವಿಡಿಯೋ ಸಖತ್ ವೈರಲ್ ಕೂಡ ಆಗಿತ್ತು. ಇದೊಂದು ದೊಡ್ಡ ವಿವಾದವಾಗಿಯೇ ಮಾರ್ಪಟ್ಟಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಕಂಬಳ ಸಮಿತಿ ದೇವರ ಬಳಿ ದೂರು ನೀಡಿದೆ.
ಪುತ್ತೂರಿನ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳಕ್ಕೆ ಸಾನ್ಯಾ ಅತಿಥಿಯಾಗಿ ಬಂದು, ತುಳು ನಾಡಿನ ಬಗ್ಗೆ ಮೆಚ್ಚಿ ಮಾತನಾಡಿದ್ದರು.
ಐ ಲವ್ ಯೂ ಪುತ್ತೂರು ಎಂದು ಹೇಳುವ ಮೂಲಕ ಅಲ್ಲಿನ ಜನರ ಪ್ರೀತಿಗೆ ಪಾತ್ರರಾಗಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಹೊರಟು ಹೋಗಿದ್ದರು.
ಆದರೆ, ಮತ್ತೆ ಅವರು ಕಂಬಳ ನೋಡುವುದಕ್ಕಾಗಿ ಸ್ನೇಹಿತೆಯರ ಜೊತೆ ವಾಪಸ್ಸಾಗಿದ್ದಾರೆ. ಆ ವೇಳೆಯಲ್ಲಿ ಹುಡುಗನೊಬ್ಬ ಸಾನ್ಯಾ ಅಯ್ಯರ್ ಜೊತೆ ಸೆಲ್ಫಿ ತಗೆದುಕೊಳ್ಳುವ ನೆಪದಲ್ಲಿ ಕೈ ಹಿಡಿದು ಎಳೆದ ಎಂದು ಹೇಳಲಾಗುತ್ತಿದೆ. ಈ ವಿಚಾರ ಕಂಬಳ ಸಮಿತಿಯ ಗಮನಕ್ಕೆ ಬಂದಿಲ್ಲ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದ್ದಾರೆ.