February 2, 2026

ನೌಷಾದ್ ಹಾಜಿ ಸೂರಲ್ಪಾಡಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅಸ್ತತ್ವಕ್ಕೆ

0
IMG-20230202-WA0009.jpg

ಮಂಗಳೂರು: ಮರ್ಹೂಂ ನೌಷಾದ್ ಹಾಜಿ ಸೂರಲ್ಪಾಡಿಯ ಸ್ಮರಣಾರ್ಥ ನೌಷಾದ್ ಹಾಜಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ಗಂಜಿಮಠ ಝಾರ ಕನ್ವೆಂಶನ್ ಸೆಂಟರ್ ಸಭಾಂಗಣದಲ್ಲಿ ಸಲಹಾ ಸಮಿತಿಯ ಉಪಸ್ಥಿತಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಆಸೀಫ್ ಆದರ್ಶ್ ಸೂರಲ್ಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಡಾ| ಇ.ಕೆ.ಎ ಸಿದ್ದೀಕ್ ಅಡ್ಡೂರು, ಕೋಶಾಧಿಕಾರಿಯಾಗಿ ಮುಸ್ತಫಾ ಇಂಜಿನಿಯರ್ ಅಡ್ಡೂರು ದೆಮ್ಮಲೆ, ಉಪಾಧ್ಯಾಕ್ಷರುಗಳಾಗಿ ಎಂ.ಬಿ ಇಸ್ಮಾಯಿಲ್ ಶಾಫಿ ಮೂಲರಪಟ್ನ, ಅಬ್ದುಲ್ ಲತೀಫ್ ಗುರುಪುರ, ಆಸೀಫ್ ಮೇಲ್ಮನೆ ಫರಂಗಿಪೇಟೆ, ಜೊತೆ ಕಾರ್ಯದರ್ಶಿಗಳಾಗಿ ಹಾಶೀರ್ ಪೇರಿಮಾರ್ ಹಾಗೂ ಎಂ.ಎಸ್ ಸಾಲಿಹ್, ಕಾರ್ಯನಿರತ (ವರ್ಕಿಂಗ್) ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಕಣ್ಣೂರು, ಸಂಘಟನಾ ಕಾರ್ಯದರ್ಶಿಯಾಗಿ ಝಕರಿಯಾ ಫರ್ವೆಝ್, ಕಾನೂನು ಸಲಹೆಗಾರರುಗಳಾಗಿ Adv. ಇಸ್ಹಾಕ್ ಕಡಬ, Adv. ಹಬೀಬ್ ರಹಿಮಾನ್ ಬಿ.ಸಿ ರೋಡ್, ಲೆಕ್ಕಪರಿಶೋಧಕರಾಗಿ ಯಾಸೀರ್ ಮೂಡಬಿದ್ರೆ, ಮಾಧ್ಯಮ ಕಾರ್ಯದರ್ಶಿಗಳಾಗಿ ಇಮ್ರಾನ್ ಅಡ್ಡೂರು, ಸಲೀಂ ಮಲಿಕ್ ಫರಂಗಿಪೇಟೆ ರವರುಗಳನ್ನು ಆಯ್ಕೆ ಮಾಡಲಾಯಿತು.

ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಟ್ರಸ್ಟ್ ನ ಸಲಹಾ ಸಮಿತಿಯ ಸದಸ್ಯ ರಫೀಕ್ ಮಾಸ್ಟರ್ ರವರು ನೇರವೇರಿಸಿದರು. ಸಲಹಾ ಸಮಿತಿಯ ಸದಸ್ಯರಾದ ಎಂ.ಹೆಚ್ ಮುಹ್ಯುದ್ದೀನ್ ಹಾಜಿ ಅಡ್ಡೂರು, ಮಾಜಿ ಮೇಯರ್ ಕೆ. ಅಶ್ರಫ್, ಏರ್ ಇಂಡಿಯಾ ಉಸ್ಮಾನ್ ಹಾಜಿ ತೋಡಾರು, ನೌಷಾದ್ ಹಾಜಿ ಸಹೋದರ ಅಬ್ದುಲ್ ಸತ್ತಾರ್, ಸುಲೇಮಾನ್ ಬೆಲ್ವಾಯಿ, ಅಖ್ತಾರ್ ಹುಸೈನ್ ಎಂ.ಎಂ, ಇಸ್ಹಾಕ್ ತೋಡಾರು ಮತ್ತು ಇತರ ಸಲಹಾ ಸಮಿತಿಯ ಸದಸ್ಯರುಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.

ಅಬ್ದುಲ್ ಹಮೀದ್ ಕಣ್ಣೂರು ಸ್ವಾಗತಿಸಿದರು. ಹಾಶೀರ್ ಪೇರಿಮಾರ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!