August 13, 2026

ಪ್ರೀತಿಸಿ ಮೋಸ ಮಾಡಿದ ಯುವತಿ: ಮನನೊಂದ ಯುವಕ ಲಾಡ್ಜ್‌ನಲ್ಲಿ ನೇಣುಬಿಗಿದು ಆತ್ಮಹತ್ಯೆ

0
image_editor_output_image895497002-1675226511004.jpg

ಹಾಸನ: ಪ್ರೀತಿಸಿದ ಯುವತಿ ಮೋಸ ಮಾಡಿದಳು ಎಂದು ಮನನೊಂದ ಹಾಸನ ನಗರದ ಯುವಕ ಚೆನ್ನೈ ಲಾಡ್ಜ್‌ನಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.

ಹಾಸನ ನಗರದ ಸಂಗಮೇಶ್ವರ ಬಡಾವಣೆಯ ಯುವಕ ಕಾರ್ತಿಕ್ (26) ಮೃತ ಯುವಕ. ಹಾಸನದ ಪ್ರತಿಷ್ಟಿತ ಹೋಟೆಲ್‌ನಲ್ಲಿ ರಿಸೆಪ್ಷನಿಷ್ಟ್ ಆಗಿ ಕೆಲಸ ಮಾಡುತ್ತಿದ್ದ ಕಾರ್ತಿಕ್‌ನನ್ನ ಹೊಳೆ ನರಸೀಪುರ ತಾಲೂಕಿನ ಮಳಲಿ ಗ್ರಾಮದ ಯುವತಿ ಪ್ರೇಮದ ಬಲೆಗೆ ಬೀಳಿಸಿದ್ದಳು. ಕಳೆದ 4 ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು.

ಈ ನಡುವೆ ಯುವತಿ ಅವನಿಂದ ಸಾಕಷ್ಟು ಹಣ ಪೀಕಿದ್ದಳು. ಇದೀಗ 4 ವರ್ಷದ ಪ್ರೀತಿ ನಿರಾಕರಿಸಿ, ಮೋಸ ಮಾಡಿದ ಹಿನ್ನೆಲೆಯಲ್ಲಿ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಯುವಕನ ಕುಟುಂಬಸ್ಥರು ಹಾಗೂ ಸಂಬಂಧಿಕರ ಆರೋಪವಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!