February 3, 2026

ಸುಳ್ಯ: ಫೇಸ್ ಬುಕ್ ನಲ್ಲಿ ಪ್ರವಾದಿ ನಿಂದನೆ ಪ್ರಕರಣ:
ಆರೋಪಿಗೆ ನ್ಯಾಯಾಂಗ ಬಂಧನ

0
under-arrest-1000x563

ಸುಳ್ಯ: ಫೇಸ್‌ಬುಕ್‌ನಲ್ಲಿ ಪ್ರವಾದಿ ನಿಂದನೆ ಮಾಡಿದ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಳೆದ 15 ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಐವರ್ನಾಡಿನ ಜಗದೀಶ್ ಕೈವಲ್ತಡ್ಕರವರು ಪೈಗಂಬರ್ ಮುಹಮ್ಮದ್‌ರವರ ಬಗ್ಗೆ ಅವಹೇಳನಕಾರಿ ಸಂದೇಶ ರವಾನಿಸಿದ್ದಾರೆಂದು ಆರೋಪಿಸಿ ಹಲವು ಸಂಘಟನೆಗಳು ಪೊಲೀಸ್ ಗೆ ದೂರು ನೀಡಿದ್ದವು.

ಕಳೆದ ಎರಡು ದಿನಗಳ ಹಿಂದೆ ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟ ಸಮಿತಿ ವತಿಯಿಂದ ಮಂಗಳೂರು ದ.ಕ.ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಆರೋಪಿಯನ್ನು ಶೀಘ್ರ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ನೀಡಲಾಗಿತ್ತು.

ನಂತರ ನ. 15 ರಂದು ಬೆಳ್ಳಾರೆ ಪೊಲೀಸರು ಆತನನ್ನು ಬಂಧಿಸಿ, ಮಂಗಳವಾರ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸುಳ್ಯ ಸಿವಿಲ್ ಕಿರಿಯ ನ್ಯಾಯಾಧೀಶ ಯಶ್ವಂತ್‌ಕುಮಾರ್ 15 ದಿನಗಳ ನ್ಯಾಯಾಂಗ ಬಂಧನ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!