ಬಳ್ಳಾರಿ: ಗಾಯಕಿ ಮಂಗ್ಲಿ ಕಾರಿನ ಗ್ಲಾಸನ್ನು ಪುಡಿ ಮಾಡಿದ ಕಿಡಿಗೇಡಿಗಳು
ಬಳ್ಳಾರಿ: ಗಾಯಕಿ ಮಂಗ್ಲಿ ಕಾರಿನ ಗ್ಲಾಸ್‌ನ್ನ ಕೆಲ ಕಿಡಿಗೇಡಿಗಳು ಪುಡಿ ಪುಡಿ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ ಉತ್ಸವದಲ್ಲಿ ಮಂಗ್ಲಿ, ಹಾಡಿನ ಮೂಲಕ ರಂಜಿಸಲು ಬಂದಿದ್ದರು. ಈ ವೇಳೆ ಮಂಗ್ಲಿ ಕಾರಿನ ಗ್ಲಾಸ್‌ನ್ನ ಕೆಲ ಕಿಡಿಗೇಡಿಗಳು ಒಡೆದು ಹಾಕಿದ್ದಾರೆ.
ಸಿಂಗರ್ ಮಂಗ್ಲಿ ಕಾರಿನ ಗ್ಲಾಸನ್ನು ಪುಂಡರು ಹೊಡೆದ ಘಟನೆ (ಶನಿವಾರ) ರಾತ್ರಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದಿದೆ. ವೇದಿಕೆ ಮೇಲೆ ಹಾಡುಗಳನ್ನ ಹೇಳಿ ವಾಪಸ್ ತೆರಳುವಾಗ ಮಂಗ್ಲಿ ನೋಡಲು ಯುವಕರು ಮುಗಿಬಿದ್ದಿದ್ದರು.
ಅಲ್ಲದೇ ವೇದಿಕೆ ಹಿಂಭಾಗದಲ್ಲಿದ್ದ ಮೇಕಪ್ ಟೆಂಟ್‌ಗೆ ನುಗ್ಗಿದ ಪುಂಡರನ್ನು ಕೂಡಲೇ ಪೋಲಿಸರು ಲಘು ಲಾಟಿ ಪ್ರಹಾರ ಮಾಡಲಾಯಿತು.
ಆ ವೇಳೆ ಮಂಗ್ಲಿ ಹೋಗುತ್ತಿದ್ದ ಕಾರಿಗೆ ಪುಂಡರು ಕಲ್ಲೆಸೆದಿದ್ದಾರೆ. ಸದ್ಯ ಬಳ್ಳಾರಿ ಉತ್ಸವದಲ್ಲಿ ಸಾವಿರಾರು ಜನ ಸೇರಿದ್ದು, ಅನುಶ್ರೀ ಮತ್ತು ಅರ್ಜುನ್ ಜನ್ಯ ಸೇರಿದಂತೆ ಹಲವು ಕಲಾವಿದರು ಭಾಗಿಯಾದ್ದರು.




