March 28, 2026

ಚಲಿಸುತ್ತಿರುವ ರೈಲಿನಿಂದ ತನ್ನ ಮಗುವನ್ನು ಎಸೆದ ತಾಯಿ

0
image_editor_output_image1661008570-1674190262618.jpg

ಜೈಪುರ: ತಾಯಿಯೊಬ್ಬಳು ತನ್ನ ಮೂರು ವರ್ಷದ ಮಗಳನ್ನು ಕೊಂದು ಆಕೆಯ ಶವವನ್ನು ಚಲಿಸುತ್ತಿರುವ ರೈಲಿನಿಂದ ಎಸೆದ ಘಟನೆ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ನಡೆದಿದೆ.

ಕ್ರೂರಿ ತಾಯಿ ತನ್ನ ಪ್ರಿಯಕರನ ಜೊತೆ ಸೇರಿ ಈ ಕೃತ್ಯ ಎಸಗಿದ್ದಾಳೆ. ಪ್ರಕರಣ ಸಂಬಂಧ ಇದೀಗ ತಾಯಿ ಸುನಿತಾ ಹಾಗೂ ಸನ್ನಿ ಅಲಿಯಾಸ್ ಮಲ್ತಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಮತ್ತು ಮಂಗಳವಾರದ ನಡುವೆ ತಾಯಿ ತನ್ನ ಮಗಳು ಕಿರಣ್‍ಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ಬಳಿಕ ತನ್ನ ಪ್ರಿಯತಮನ ಸಹಾಯದಿಂದ ಆಕೆಯ ಶವವನ್ನು ಬೆಡ್‍ಶೀಟ್‍ನಿಂದ ಸುತ್ತಿ ಬಿಸಾಕಲೆಂದು ಶ್ರೀಗಂಗಾನಗರ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ.

ಅಂತೆಯೇ ಬೆಳಗ್ಗೆ 6.10ಕ್ಕೆ ಹೊರಟ ರೈಲಿನಲ್ಲಿ ಇಬ್ಬರೂ ಶವ ಸಮೇತ ಪ್ರಯಾಣ ಬೆಳೆಸಿದ್ದಾರೆ. ರೈಲು ಬ್ರಿಡ್ಜ್ ಮೇಲೆ ತೆರಳುತ್ತಿದ್ದಂತೆಯೇ ಶವವನ್ನು ಕಾಲುವೆಗೆಂದು ಎಸೆದಿದ್ದಾರೆ.

ಆದರೆ ಅದು ಕಾಲುವೆಗೆ ಬೀಳದೆ ರೈ;ವೆ ಹಳಿಯ ಮೇಲೆ ಬಿದ್ದಿದೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಶ್ರೀಗಂಗಾನಗರ ಎಸ್‍ಪಿ ಆನಂದ್ ಶರ್ಮಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!