March 27, 2026

ಮಂಗಳೂರು: ಕಳ್ಳಸಾಗಣೆಯ ಯತ್ನ ವಿಫಲಗೊಳಿಸಿದ ಕಸ್ಟಮ್ಸ್ ಅಧಿಕಾರಿಗಳು: 2 ಕೋಟಿ ರೂ.ಮೌಲ್ಯದ ಚಿನ್ನ ವಶ

0
IMG-20230119-WA0027.jpg

ಮಂಗಳೂರು: ಜನವರಿ 01ರಿಂದ 18ರವರೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಚಿನ್ನ ಕಳ್ಳಸಾಗಣೆ ಯತ್ನಗಳನ್ನು ವಿಫಲಗೊಳಿಸಿದ್ದು, ಬರೋಬ್ಬರಿ 3ಕೆಜಿ 677 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು ಇದರ ಬೆಲೆ 2 ಕೋಟಿ 01 ಲಕ್ಷದ 69,800 ರೂ.ಆಗಿದೆ ಎಂದು ಅಂದಾಜಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಕಸ್ಟಮ್ಸ್ ಅಧಿಕಾರಿಗಳು, 8 ಮಂದಿ ಪುರುಷ ಪ್ರಯಾಣಿಕರು ದುಬೈ ಮತ್ತು ಅಬುಧಾಬಿಯಿಂದ ವಿಮಾನದಲ್ಲಿ ಬಂದಿಳಿದಿದ್ದು, ಚಿನ್ನವನ್ನು ಪೇಸ್ಟ್ ರೂಪದಲ್ಲಿ ಘನ ಗಮ್‌ನೊಂದಿಗೆ ಬೆರೆಸಿ ಪ್ಯಾಕೆಟ್‌ಗಳಾಗಿ ಮಾಡಿ, ಗುದನಾಳದಲ್ಲಿ ಮರೆಮಾಡಿ, ಟ್ರಾಲಿ ಬ್ಯಾಗ್ ನಲ್ಲಿ ಮರೆಮಾಚಿ, ಬನಿಯನ್ ನಲ್ಲಿ ಅಡಗಿಸಿಟ್ಟು ಕಳ್ಳ ಸಾಗಾಣಿಕೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

ಇನ್ನು ಓರ್ವ ಪ್ರಯಾಣಿಕನಿಂದ 3 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಈ ಸಿಗರೇಟ್ ಗಳನ್ನೂ ವಶಪಡಿಸಿ ಕೊಂಡಿರುವುದಾಗಿ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!