ಟೆರೇಸ್ ಮೇಲೆ ಗಾಳಿಪಟ ಬಿಡುವಾಗ ಹೈ ಟೆನ್ಶನ್ ವೈಯರ್ ಸ್ಪರ್ಶ: 11 ವರ್ಷದ ಬಾಲಕ ಮೃತ್ಯು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೈಟೆನ್ಶನ್ ವೈಯರ್ ಗೆ ಮತ್ತೊಂದು ಜೀವ ಬಲಿಯಾಗಿದೆ. ಆರ್‍ಟಿ ನಗರದ ಚಾಮುಂಡಿ ನಗರದ ಚಿಂಗಮ್ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದೆ.
ಗಾಳಿಪಟ ಬಿಡಲು ಹೋಗಿ ಹೈ ಟೆನ್ಶನ್ ವೈಯರ್ ತಗುಲಿ 11 ವರ್ಷದ ಅಬೂಬಕ್ಕರ್ ಎಂಬ ಬಾಲಕ ಮೃತಪಟ್ಟಿದ್ದಾನೆ. ಸೋಮವಾರ ಈ ಘಟನೆ ನಡೆದಿದ್ದು, ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆ ಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ ಅಬೂಬಕ್ಕರ್ ಮೃತಪಟ್ಟಿದ್ದಾನೆ.
ಇದೇ ಜಾಗದಲ್ಲಿ ಈ ಹಿಂದೆ ನಾಲ್ವರು ಬಾಲಕರು ಹೈ ಟೆನ್ಶನ್ ವೈಯರ್ ಗೆ ಬಲಿಯಾಗಿದ್ದು, ಇದು ಐದನೇ ಘಟನೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮನೆಯ ಮೇಲೆಯೇ ಹಾದು ಹೋಗಿರುವ ಹೈಟೆನ್ಶ್ ವೈಯರ್, ಟೆರೇಸ್ ಮೇಲಿಂದ ಕೈಗೆ ತಾಕುವಂತಿದೆ




