February 3, 2026

ಮನೆಯ ಮೇಲೆ ಅಪರಿಚಿತ ವ್ಯಕ್ತಿಗಳಿಂದ ಗುಂಡಿನ ದಾಳಿ: 6 ತಿಂಗಳ ಮಗು, ತಾಯಿ 6 ಮಂದಿ ಸಾವು

0
image_editor_output_image-1550122380-1673930156208.jpg

ವಾಷಿಂಗ್ಟನ್:‌ ಮನೆಯ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ 6 ತಿಂಗಳ ಮಗು, ತಾಯಿ ಸೇರಿದಂತೆ 6 ಮಂದಿ ಬಲಿಯಾದ ಘಟನೆ ಕ್ಯಾಲಿಫೋರ್ನಿಯಾದ ಗೋಶೆನ್ ನಲ್ಲಿ ನಡೆದಿದೆ.

ಅಪರಿಚಿತರ ಗುಂಡಿನ ದಾಳಿಯಲ್ಲಿ 6 ತಿಂಗಳ ಹಸುಳೆ, 17 ವರ್ಷದ ತಾಯಿ ಸೇರಿದಂತೆ ಮನೆಯಲ್ಲಿದ್ದ ಇತರ ನಾಲ್ವರು ಮೃತಪಟ್ಟಿದ್ದಾರೆ.

ಸೋಮವಾರ ಮುಂಜಾನೆ 3:30 ರ ಸಮಯದಲ್ಲಿ ಈ ದಾಳಿ ನಡೆದಿದ್ದು, ಗುಂಡಿನ ದಾಳಿಯನ್ನು ನೋಡಿ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಬಂದು ನೋಡಿದಾಗ ಮಗು, ತಾಯಿ ಸೇರಿದಂತೆ ಇತರರು ರಕ್ತದ ಮಡುವಿನ ಬಿದ್ದಿದ್ದರು.

Leave a Reply

Your email address will not be published. Required fields are marked *

error: Content is protected !!