March 27, 2026

ಬಡಗಬೆಟ್ಟು ಗ್ರಾಮದ ಮಂಚಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಗ್ನಿ ಅವಘಡ

0
image_editor_output_image1918142536-1673351953776.jpg

ಮಣಿಪಾಲ: ಬಡಗಬೆಟ್ಟು ಗ್ರಾಮದ ಮಂಚಿ ರಾಜೀವನಗರದ ಮೀಸಲು ಅರಣ್ಯ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಕಾಡಿನಲ್ಲಿ ಹತ್ತಿಕೊಂಡ ಬೆಂಕಿಯ ಕೆನ್ನಾಲಿಗೆ ಇಡೀ ಸುತ್ತಮುತ್ತಲಿನ ಪರಿಸರಕ್ಕೆ ವ್ಯಾಪಕವಾಗಿ ಹರಡಿದೆ. ಇದರಿಂದ ಸುತ್ತಮುತ್ತ ಪರಿಸರದಲ್ಲಿ ಕೆಲಕಾಲ ದಟ್ಟ ಹೊಗೆ ಆವರಿಸಿಕೊಂಡಿತ್ತು.

ರಾಜೀವನಗರದ ರತ್ನ‌ ಆಚಾರ್ಯ ಅವರ ಹಡಿಲು ಗದ್ದೆಯ ಹುಲ್ಲು ಗಾವಲು, ಮನೆಯೊಂದರ ಬಳಿ ರಾಶಿ ಹಾಕಿದ್ದ ಕಟ್ಟಿಗೆಯ ರಾಶಿ, ಕಾಡಿನ ಅಕೇಶಿಯ ಮರಗಳು ಬೆಂಕಿಗೆ ಆಹುತಿಯಾಗಿವೆ.

Leave a Reply

Your email address will not be published. Required fields are marked *

error: Content is protected !!