November 22, 2024

ಬೆಳ್ತಂಗಡಿ: ನಾಟಕ ಪ್ರದರ್ಶನ ವೇಳೆ ಕಲಾವಿದರಿಗೆ ಹಲ್ಲೆ:ಶಾಸಕರ ಆಗಮನದ ಹಿನ್ನೆಲೆ ಪ್ರದರ್ಶನ ತಡೆದ ಆಯೋಜಕರು
 

0

ಬೆಳ್ತಂಗಡಿ: ನಾಟಕ ಪ್ರದರ್ಶನದ ವೇಳೆ ಕಲಾವಿದನ ಮೇಲೆ ಹಲ್ಲೆಗೆ ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ತಾಲೂಕಿನ ಅರಂಬೋಡಿ ಸರಕಾರಿ ಶಾಲೆಯ ವಾರ್ಷಿಕೋತ್ಸವದ ವೇಳೆ ನಡೆದಿದೆ. ಸಮಾರಂಭಕ್ಕೆ ಶಾಸಕ ಹರೀಶ್ ಪೂಂಜಾ ಆಗಮಿಸಿದ್ದು, ಈ ವೇಳೆ ಆಯೋಜಕರು ನಾಟಕವನ್ನು ತಡೆಯುವಂತೆ ಸೂಚಿಸಿದ್ದಾರೆ. ಆದರೆ, ಅರ್ಧದಲ್ಲಿ ನಿಲ್ಲಿಸಲು ಕಲಾವಿದರು ಒಪ್ಪದಿದ್ದಾಗ ಆಯೋಜಕರು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಜನವರಿ 1 ರಂದು ರಾತ್ರಿ ಸುರತ್ಕಲ್ ನ ತುಳುವೆರೆ ತುಡರ್ ತಂಡದಿಂದ ನಾಟಕ ನಡೆಯುತ್ತಿತ್ತು. ಕಾರ್ಯಕ್ರಮಕ್ಕೆ ಸುಮಾರು ಎರಡು ಗಂಟೆಯ ವೇಳೆಗೆ ಶಾಸಕ ಹರೀಶ್ ಪೂಂಜಾ ಮತ್ತು ಅವರ ಹಿಂಬಾಲಕರು ಆಗಮಿಸಿದ್ದರು. ಈ ಸಂದರ್ಭದಲ್ಲಿ ನಾಟಕವನ್ನು ಸ್ಥಗಿತಗೊಳಿಸಿ ಶಾಸಕರಿಗೆ ವೇದಿಕೆಯ ಮೇಲೆ ಅವಕಾಶ ಮಾಡಿಕೊಡ ಬೇಕು ಎಂದು ಹೇಳಿದರು. ಆದರೆ ನಾಟಕದ ಪ್ರಮುಖ ದೃಶ್ಯ ನಡೆಯುತ್ತಿದ್ದುದರಿಂದ ಕಲಾವಿದರು ಇದಕ್ಕೆ ನಿರಾಕರಿಸಿದರು. ಜನತೆಗೆ ರಸಭಂಗವಾಗುತ್ತದೆ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದರು.

ಆದರೆ ಇದಾವುದಕ್ಕೂ ಕಿವಿಗೊಡದೆ ವಿದ್ಯುತ್ ಕಡಿತಗೊಳಿಸಿ ಕಲಾವಿದರ ಮೇಲೆ ಕೈ ಮಾಡಿದರು. ಅಲ್ಲದೆ, ಮಹಿಳಾ ಕಲಾವಿದರು ಇರುವುದನ್ನೂ ಪರಿಗಣಿಸದೆ ಅವಾಚ್ಯ ಪದಗಳಿಂದ ನಿಂದಿಸಿದರು. ಘಟನೆಯ ಬಗ್ಗೆ ಬುಧವಾರದಂದು ಮಂಗಳೂರಿನಲ್ಲಿ ಸಭೆ ಸೇರಿದ ತುಳು ನಾಟಕ ಕಲಾವಿದರ ಒಕ್ಕೂಟ ಘಟನೆಯನ್ನು ಖಂಡಿಸಿದ್ದಲ್ಲದೆ ಸಂಬಂಧಿತರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *

error: Content is protected !!