March 19, 2026

ಬಂಟ್ವಾಳ: ತೆಂಗಿನಕಾಯಿ ಕೀಳುವಾಗ ಆಯತಪ್ಪಿ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

0
IMG-20230101-WA0066.jpg

ಬಂಟ್ವಾಳ: ನಾವೂರ ಎಂಬಲ್ಲಿ ತೆಂಗಿನಕಾಯಿ ಕೀಳುವ ವೇಳೆ ವ್ಯಕ್ತಿಯೋರ್ವ ಆಯತಪ್ಪಿ ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ನಾವೂರ ಸೂರ ನಿವಾಸಿ ಸುರೇಶ್ (40) ಮೃತಪಟ್ಟ ವ್ಯಕ್ತಿ.

ಸುರೇಶ್ ಅವರು ಹಲವಾರು ವರ್ಷಗಳಿಂದ ತೆಂಗಿನಕಾಯಿ, ಅಡಿಕೆ ಮರದಿಂದ ಕಾಯಿ ಕೀಳುವ ಕೂಲಿ ಮಾಡುತ್ತಿದ್ದು, ಎಂದಿನಂತೆ ತೆಂಗಿನಕಾಯಿ ಕೀಳುವ ಕೂಲಿಗಾಗಿ ಅದೇ ಊರಿನ ಒಂದು ಮನೆಗೆ ಹೋಗಿದ್ದರು. ತೋಟದಲ್ಲಿ ತೆಂಗಿನಕಾಯಿ ಕೀಳುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಮರದಿಂದ ಕೆಳಗೆ ಬಿದ್ದಿದ್ದರು.

ಇನ್ನು ಮರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಬಂಟ್ವಾಳ ಆಸ್ಪತ್ರೆಗೆ ಕೆರದುಕೊಂಡು ಹೋಗಿ, ಅಲ್ಲಿನ ವೈದ್ಯರು ಪರೀಕ್ಷಿಸಿ ಗಂಭೀರ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಹೋಗಲು ಸೂಚಿಸಿದ್ದು, ಮಂಗಳೂರಿಗೆ ಕರೆದುಕೊಂಡು ಹೋಗುವ ವೇಳೆ ಆತ ಮೃತಪಟ್ಟಿರುವ ಬಗ್ಗೆ ವೈದ್ಯರು ಪರೀಕ್ಷೆ ನಡೆಸಿ ತಿಳಿಸಿದ್ದಾರೆ.

ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ‌ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!