ಕಾಲೇಜು ವಿದ್ಯಾರ್ಥಿಗಳ ಪ್ರವಾಸಿ ಬಸ್ ಅಪಘಾತ: ಓರ್ವ ಮೃತ್ಯು, ಹಲವರು ಗಾಯ
ಇಡುಕ್ಕಿ: ಕಾಲೇಜು ವಿದ್ಯಾರ್ಥಿಗಳ ಪ್ರವಾಸಿ ಬಸ್ ಕಮರಿಗೆ ಬಿದ್ದು ವಿದ್ಯಾರ್ಥಿಯೊಬ್ಬರು ಮೃತಪಟ್ಟು, ಸಿಬ್ಬಂದಿ ಸೇರಿದಂತೆ 44 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಅಡಿಮಾಲಿ ಬಳಿ ಭಾನುವಾರ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಮಿಲ್ಹಾಜ್ ಎಂದು ಗುರುತಿಸಲಾಗಿದೆ.
ಬಸ್ ಮಲಪ್ಪುರಂನ ತಿರೂರ್ನಲ್ಲಿರುವ ಪ್ರಾದೇಶಿಕ ಕೈಗಾರಿಕಾ ತರಬೇತಿ ಸಂಸ್ಥೆಯ (ಐಟಿಐ) ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗುತ್ತಿದ್ದಾಗ ಕಲ್ಲರಕುಟ್ಟಿ-ಮೈಲಾಡುಂಪಾರ ಮಾರ್ಗದ ತಿಂಗಳಕಡ್ ಸಮೀಪದ ಮುನಿಯಾರ ಎಂಬಲ್ಲಿ ಈ ದುರ್ಘಟನೆ ನಡೆದಿದೆ.
ಇನ್ನು ಕಿರಿದಾದ ರಸ್ತೆಯಲ್ಲಿ ಕೂದಲೆಳೆ ಅಂತರದ ತಿರುವಿನಲ್ಲಿ ಬಸ್ ಕಮರಿಗೆ ಬಿದ್ದಿದ್ದು, ಭಾರೀ ಸದ್ದು ಕೇಳಿ ಅಪಘಾತ ನಡೆದ ಸ್ಥಳಕ್ಕೆ ತೆರಳಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.




