December 3, 2024

ಬಂಟ್ವಾಳ: ಅಡಕೆ ಬೆಳೆಗಾರರ ಕುರಿತು ಗೃಹ ಸಚಿವರ ಹೇಳಿಕೆ ಖಂಡಿಸಲು ಸಾಧ್ಯವಾಗದ ಕರಾವಳಿಯ ಎಲ್ಲ ಬಿಜೆಪಿ ಶಾಸಕರು ರಾಜೀನಾಮೆ ನೀಡಬೇಕು: ರಮಾನಾಥ ರೈ ಆಗ್ರ

0

ಬಂಟ್ವಾಳ: ಅಡಕೆ ಬೆಳೆಗಾರರ ಕುರಿತು ಗೃಹ ಸಚಿವರ ಹೇಳಿಕೆ ಖಂಡಿಸಲು ಸಾಧ್ಯವಾಗದ ಕರಾವಳಿಯ ಎಲ್ಲ ಬಿಜೆಪಿ ಶಾಸಕರು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಒತ್ತಾಯಿಸಿದ್ದಾರೆ.

ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ ಬಿ.ಸಿ.ರೋಡಿನ ಫ್ಲೈಓವರ್ ಸಮೀಪ ರಾಜ್ಯ ಸರಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅಡಕೆ ಬೆಳೆಗಾರರ ಪರವಾಗಿ ಕಾಂಗ್ರೆಸ್ ಸರಕಾರವಿದ್ದಾಗ ಹಲವು ಅನುಕೂಲಗಳನ್ನು ಮಾಡಲಾಗಿತ್ತು. ಆದರೆ ಇದೀಗ ಬಿಜೆಪಿ ಸರಕಾರದ ಸಚಿವರೊಬ್ಬರು ಅವರ ಹಿತಕ್ಕೆ ವಿರುದ್ಧವಾದ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಅಡಕೆ ಬೆಳೆ ಜಾಸ್ತಿಯಾಗಿರುವ ಸಂದರ್ಭ ಆಮದಿಗೆ ಪ್ರೋತ್ಸಾಹ ಮಾಡುವ ಕಾರ್ಯ ನಡೆಯುವುದು ಅಗತ್ಯವಿಲ್ಲ. ಗೃಹಸಚಿವರ ಹೇಳಿಕೆ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ, ಅವರ ಹೇಳಿಕೆಯನ್ನು ಖಂಡಿಸಲು ಸಾಧ್ಯವಾಗದ ಕರಾವಳಿಯ ಎಲ್ಲ ಶಾಸಕರೂ ರಾಜೀನಾಮೆ ನೀಡಬೇಕು ಎಂದರು.

ಪಕ್ಷದ ಪ್ರಮುಖರಾದ ಪಿಯೂಸ್ ಎಲ್. ರೋಡ್ರಿಗಸ್, ಪದ್ಮನಾಭ ರೈ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು ಮಾತನಾಡಿದರು.ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಪಕ್ಷ ಪ್ರಮುಖರಾದ ಮೋಹನ್ ಗೌಡ ಕಲ್ಮಂಜ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ದೇವಿಪ್ರಸಾದ್ ಪೂಂಜ, ಅಬ್ಬಾಸ್ ಆಲಿ, ಸೋಮಶೇಖರ ಗೌಡ, ಸದಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!