ಕಚ್ಚಿದ ಹಾವನ್ನೇ ಹಿಡಿದುಕೊಂಡು ಆಸ್ಪತ್ರೆಗೆ ಬಂದ ಭೂಪ
ಚಿಕ್ಕಮಗಳೂರು: ವ್ಯಕ್ತಿಯೋರ್ವ ತನಗೆ ಕಚ್ಚಿದ ಹಾವನ್ನೇ ಹಿಡಿದುಕೊಂಡು ಆಸ್ಪತ್ರೆಗೆ ಬಂದ ವಿಚಿತ್ರ ಘಟನೆ ಜಿಲ್ಲೆಯ ತರೀಕೆರೆಯಲ್ಲಿ ನಡೆದಿದೆ.
ಕೊಲ್ಕತ್ತಾ ಮೂಲದ ಆಸೀಫ್ ಎಂಬಾತ ತನಗೆ ಕಚ್ಚಿದ ಹಾವಿನ ಸಮೇತ ತರೀಕೆರೆಯ ಜಿಲ್ಲಾ ಆಸ್ಪತ್ರೆಗೆ ಬಂದಿದ್ದಾನೆ.
ತರೀಕೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಲಸಕ್ಕೆ ಬಂದಿದ್ದ ಆಸೀಫ್, ಊರಿಗೆ ಹೋಗಲೆಂದು ರೈಲ್ವೆ ನಿಲ್ದಾಣದ ಬಳಿ ಬಂದಿದ್ದಾನೆ. ಈ ವೇಳೆ ಕೊಳಕ ಮಂಡಲ ಹಾವು ಆಸೀಫ್ ಗೆ ಕಚ್ಚಿದೆ.




