ನಿಗೂಢ ಕೊಲೆ ಪ್ರಕರಣ ಭೇದಿಸಿದ ಪೊಲೀಸರು: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸೇರಿ ಐವರ ಸೆರೆ
ಬೆಂಗಳೂರು: ಕೋಣನಕುಂಟೆಯ ಹರಿನಗರದ ಎಚ್. ಶರತ್ ಅವರ ಅಪಹರಣ ಹಾಗೂ ನಿಗೂಢ ಕೊಲೆ ಪ್ರಕರಣವನ್ನು ನಗರದ ಕಬ್ಬನ್‌ಪಾರ್ಕ್ ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರದ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಸಂಘಟನೆಗಳ ಒಕ್ಕೂಟ) ರಾಜ್ಯ ಅಧ್ಯಕ್ಷ ಎಚ್.ಜಿ. ವೆಂಕಟಾಚಲಪತಿ ಹಾಗೂ ಅವರ ಪುತ್ರ ಎ.ವಿ. ಶರತ್ ಕುಮಾರ್, ಸಹಚರರಾದ ಆರ್.ಶ್ರೀಧರ್, ಕೆ. ಧನುಷ್, ಯಲಹಂಕದ ಎಂ.ಪಿ. ಮಂಜುನಾಥ್
ಬಂಧಿತರು.
ಪ್ರಕರಣ ನಡೆದು 9 ತಿಂಗಳ ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶರತ್‌ಗೆ ಚಿತ್ರಹಿಂಸೆ ನೀಡಿ ಭೀಕರವಾಗಿ ಕೊಲೆ ಮಾಡಿ ಚಾರ್ಮಾಡಿ ಘಾಟ್‌ನಲ್ಲಿ ಮೃತದೇಹ ಎಸೆಯಲಾಗಿತ್ತು.
ಸಬ್ಸಿಡಿ ದರದಲ್ಲಿ ಸರ್ಕಾರದಿಂದ ಕಾರು ಕೊಡಿಸುವುದಾಗಿ ಎಚ್.ಶರತ್ ಚಿಕ್ಕಬಳ್ಳಾಪುರ ಹಾಗೂ ಯಲಹಂಕ ವಾಸಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದರು. ಕಾರನ್ನು ಕೊಡಿಸದ ಕಾರಣಕ್ಕೆ ಗ್ರಾಹಕರು ಆತನ ವಿರುದ್ಧ ತಿರುಗಿ ಬಿದ್ದಿದ್ದರು. ಶರತ್ ವಿರುದ್ಧವೂ ವಂಚನೆ ಪ್ರಕರಣ ದಾಖಸಿದ್ದರು.