ದಾಳಿಗೊಳಗಾದ ಬೋಳಿಯಾರು ಸುಬ್ಬುಗೋಳಿ ಮಸೀದಿಗೆ ಭೇಟಿ ನೀಡಿದ ಪಾಪ್ಯುಲರ್ ಫ್ರಂಟ್ ಜಿಲ್ಲಾ ಸಮಿತಿ
ಬಂಟ್ವಾಳ: ಬೋಳಿಯಾರು ಪ್ರದೇಶದ ಸುಬ್ಬುಗೋಳಿಯ ತಾಜೂಲ್ ಉಲಮಾ ಮಸೀದಿಗೆ ತಡರಾತ್ರಿ ತಂಡವು ದಾಳಿ ನಡೆಸುವುದರೊಂದಿಗೆ ಮಸೀದಿಯ ಧರ್ಮಗುರುಗಳ ಕೊಲೆಗೆ ಯತ್ನಿಸಿದ್ದು, ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿದ ವಿಚಾರಕ್ಕೆ ಸಂಬಂಧಿಸಿ ಸ್ಥಳಕ್ಕೆ ಪಿಎಫ್ ಐ ನಿಯೋಗ ಭೇಟಿ ನೀಡಿದೆ.
ಘಟನೆಯ ಮಾಹಿತಿ ಪಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿಟ್ಲ ಜಿಲ್ಲಾ ಅಧ್ಯಕ್ಷರಾದ ರಹೀಂ ಆಲಾಡಿ, ಪುತ್ತೂರು ಝೋನ್ ಅಧ್ಯ್ಯಕ್ಷರಾದ ಝಕರೀಯಾ ಗೋಲ್ತಮಜಲು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನೀಫ್ ರಂತಡ್ಕ, ಮೆಲ್ಕಾರ್ ಡಿವಿಜನ್ ಅಧ್ಯಕ್ಷರಾದ ಮಜೀದ್ ಆಲಡ್ಕ, ಪ್ರಧಾನ ಕಾರ್ಯದರ್ಶಿ ಮುಬಾರಕ್ ಕಾರಾಜೆ, ಜಿಲ್ಲಾ ಸಮಿತಿ ಸದಸ್ಯರಾದ ರಹಿಮಾನ್ ಮಠ, ಬೋಳಿಯಾರು ವಲಯ ಅಧ್ಯಕ್ಷರಾದ ಅಝೀಝ್ ಬೋಳಿಯಾರು ಭೇಟಿ ನೀಡಿದರು.
ಈ ಸಂಧರ್ಭದಲ್ಲಿ ಮಾಧ್ಯಮದವರೊಂದಿಗೆ ಮತನಾಡಿದ ಝಕರೀಯಾ ಗೋಲ್ತಮಜಲು, ಜಿಲ್ಲೆಯಲ್ಲಿ ನಿರಂತರವಾಗಿ ಸಂಘಪರಿವಾರಿಗಳಿಂದ ಮುಸ್ಲಿಮರ ಮೇಲೆ ಹಾಗೂ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿಗಳು ನಡೆಯುತ್ತಿದ್ದು ಇದರ ವಿರುದ್ದ ಪಾಪ್ಯುಲರ್ ಫ್ರಂಟ್ಆಫ್ ಇಂಡಿಯಾ ಕಾನೂನು ರೀತಿಯ ಹೋರಾಟ ಮಾಡುತ್ತಿದ್ದು ಸುಬ್ಬುಗೋಳಿಯ ಮಸೀದಿಯ ಮೇಲೆ ದಾಳಿ ಮಾಡಿದ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟ ಉನ್ನತ ಮಟ್ಟದ ಪೋಲಿಸ್ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿರುವುದು ಎಂದು ಹೇಳಿದರು.





