ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುದ್ರೆಬೆಟ್ಟು ಕಲ್ಲಡ್ಕ ಇಲ್ಲಿ ಮಕ್ಕಳ ದಿನಾಚರಣೆ ಆಚರಣೆ
ಬಂಟ್ವಾಳ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುದ್ರೆಬೆಟ್ಟು ಕಲ್ಲಡ್ಕ ಇಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.
ಶಾಲಾ ವಿದ್ಯಾರ್ಥಿ ನಾಯಕಿ ಕುಮಾರಿ ಪಂಚಮಿ ಇವರು ಜವರಲಾಲ್ ನೆಹರು ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ವಿಠಲ್ ಬಿ. ಆರ್ ರವರು ಮಕ್ಕಳಿಗೆ ಪುಸ್ತಕ ಪಾಠದ ಜೊತೆಗೆ ಜೀವನದ ಪಾಠವನ್ನು ಕಲಿಸುವಂತೆ ಆಗಬೇಕು ಎಂದು ಹೇಳಿದರು.
ಮಾಜಿ ಶಾಸಕರಾದ ಶ್ರೀ ಏ. ರುಕ್ಮಯ್ಯ ಪೂಜಾರಿ ಮಕ್ಕಳಗೆ ಮನೆಯಿಂದ ಸಂಸ್ಕಾರ ಹಾಗೂ ಶಾಲೆಯಿಂದ ಉತ್ತಮ ಗುಣಮಟ್ಟದ ಶಿಕ್ಷಣ ದೊರೆತಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ರಮೇಶ ಕುದ್ರೆಬೆಟ್ಟುಇವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಲತೀಶ್ ಕುರ್ಮನ್, ಶ್ರೀಮತಿ ರಂಜಿನಿ, ಶ್ರೀಮತಿ ಶೋಭಾ, ಇಂಡಿಯನ್ ಗ್ಯಾಸ್ ಮಾಲಕರು ಜಗನ್ನಾಥ ಚೌಟ ಮಾಣಿ, ದಾಸ್ ಪೆಟ್ರೋಲ್ ಮಾಲಕರಾದ ಸುಭಾಷ್ ರೈ ,ಮಾಜಿ ಪಂಚಾಯತ್ ಅಧ್ಯಕ್ಷರಾದ ಸುಂದರ ಸಾಲಿಯಾನ್, ಆಶಾ ಕಾರ್ಯಕರ್ತೆ ಸುಜಾತ ಎಂ , ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀಮತಿ ಶಿಲ್ಪ ,ಅಂಗನವಾಡಿ ಶಿಕ್ಷಕಿ ಶ್ರೀಮತಿ ಸುರೇಖಾ, ಛಾಯಾಚಿತ್ರಗ್ರಾಹಕರ ದ ಚಿನ್ನ ಮೈರ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಿವರಾಜ್ ಕುಮಾರ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಶ್ರೀಮತಿ ಶ್ಯಾಮಲಾ ನೆಲ್ಲಿ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಶೈಕ್ಷಣಿಕ ಮತ್ತು ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರೋತ್ಸಾಹಕರ ಬಹುಮಾನ ವಿತರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಚೇತನ ಪಿ. ವಿ ಸ್ವಾಗತಿಸಿ ಸಹಶಿಕ್ಷಕಿ ರೇಖಾ ನೆಟ್ಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಿಕ್ಷಕಿ ಶ್ರೀಮತಿ ಭಬಿತ ಸಹಕರಿಸಿದರು.








