December 19, 2025

ಬೈಬಲ್ ಆದರ್ಶ ನಿತ್ಯಜೀವನದಲ್ಲೂ ಪಾಲನೆಯಾಗಲಿ : ಫಾದರ್ ವಾಲ್ಟರ್ ಡಿಮೆಲ್ಲೋ: ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಸಹೋದರತ್ವದ ಭಾನುವಾರ” ಕಾರ್ಯಕ್ರಮ

0
IMG-20211115-WA0157

ಬಂಟ್ವಾಳ : ನಿತ್ಯ ಜೀವನದಲ್ಲೂ ಬೈಬಲ್ ನ ಆದರ್ಶಗಳನ್ನು ಪಾಲಿಸಬೇಕು, ಆಗ ಮಾತ್ರ ಸಹೋದರತ್ವದ ಭಾನುವಾರದ ಆಚರಣೆಗೆ ಮಹತ್ವ ಬರುತ್ತದೆ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಜುಡೀಶಿಯಲ್ ವಿಕಾರ್ ರವರಾದ ಅತೀ ವಂದನೀಯ ಫಾದರ್ ವಾಲ್ಟರ್ ಡಿಮೆಲ್ಲೊ ಹೇಳಿದರು.

ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ನಲ್ಲಿ ನವಂಬರ್ 14 ರಂದು ನಡೆದ “ಸಹೋದರತ್ವದ ಭಾನುವಾರದ” ಕಾರ್ಯಕ್ರಮದಲ್ಲಿ ಪ್ರಧಾನ ಧರ್ಮಗುರುಗಳಾಗಿ ಭಾಗವಹಿಸಿ ಪ್ರಬೋದನೆ ನೀಡಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿ ಎಲ್ಲರಿಗೂ ಆಶೀರ್ವಚನ ನೀಡಿದರು.


ಕ್ರೈಸ್ತ ಸಹೋದರ ಸಹೋದರಿಯರಾದ ನಾವು ನಿತ್ಯ ಜೀವನದಲ್ಲಿ ಚರ್ಚ್ ಗಳಲ್ಲಿ, ಮನೆಯಲ್ಲಿ ಮತ್ತು ಇತರ ಕಡೆಗಳಲ್ಲಿ ಪ್ರಾರ್ಥನೆಗಳನ್ನು ಮಾಡುತ್ತೇವೆ ಹಾಗೂ ಒಳ್ಳೊಳ್ಳೆಯ ಆಧ್ಯಾತ್ಮಿಕ ಗೀತೆಗಳನ್ನು ಹಾಡಿ ಸ್ತುತಿಸುತ್ತೇವೆ. ಇದರಂತೆ ನಮ್ಮ ನಿತ್ಯ ಜೀವನದಲ್ಲಿಯೂ ಪವಿತ್ರ ಬೈಬಲ್‌ ನಮಗೆ ಬೋಧಿಸಿದಂತೆ ಒಬ್ಬೊರನ್ನೊಬ್ಬರು ಕ್ಷಮಿಸಿ ಜೀವನ ನಡೆಸಲು ಯಾಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದ ಅವರು, ನಮ್ಮ ಶ್ರೇಷ್ಟ ಗುರುವಾದ ಪ್ರಭು ಯೇಸು ಕ್ರಿಸ್ತರು ತೋರಿದ ಹಾದಿಯಲ್ಲಿ ನಾವೆಲ್ಲರೂ ಮುನ್ನಡೆಯುವಂತೆ ಕರೆ‌ನೀಡಿದರು. ಕ್ರೈಸ್ತರು ಶಿಕ್ಷಣ ಕ್ಷೇತ್ರ, ವೈದ್ಯಕೀಯ ಕ್ಷೇತ್ರ ಹಾಗೂ ಇತರ ಸಮಾಜ ಮುಖಿ ಸೇವೆಯ ಮುಖಾಂತರ ತಮ್ಮನ್ನು ತೊಡಗಿಸಿಕೊಂಡು ನೀಡಿದ ಹಾಗೂ ನೀಡುವ ಸೇವೆ ವರ್ಣಿಸಲು ಅಸಾಧ್ಯ ಎಂದು ಪ್ರವಚನದಲ್ಲಿ ಉಲ್ಲೇಖಿಸಿದ ಅವರು,ದಿವ್ಯ ಬಲಿಪೂಜೆಯ ಬಳಿಕ ಸೂರಿಕುಮೇರು ಚರ್ಚ್ ವ್ಯಾಪ್ತಿಗೆ ಒಳಪಟ್ಟ ಕುಟುಂಬದ ಸದಸ್ಯರ ಕಂಪ್ಯೂಟರೀಕರಣಗೊಂಡ ಜನನ ಪ್ರಮಾಣ ಪತ್ರ ಮತ್ತು ಚರ್ಚ್ ಗೆ ಸಂಬಂಧ ಪಟ್ಟ ಇತರ ದಾಖಲೆಗಳನ್ನು ಉದ್ಘಾಟಿಸಿ, ಸೂರಿಕುಮೇರು ಚರ್ಚ್ ನ ಹಿರಿಯ ಸದಸ್ಯರಾದ ಸಿಸಿಲಿಯಾ ಪಿಂಟೊ ಹಾಗೂ ಕಿರಿಯ ಸದಸ್ಯರಾದ ಎಲ್ಡನ್ ಸುವಾರಿಸ್ ರವರಿಗೆ ಮೊದಲ ಕಂಪ್ಯೂಟರೀಕೃತ ಜನನ ಪ್ರಮಾಣ ಪತ್ರವನ್ನು ನೀಡಿದರು.

ಈ ಸಂದರ್ಭದಲ್ಲಿ ಸೂರಿಕುಮೇರು ಚರ್ಚ್ ನ ಧರ್ಮಗುರುಗಳಾದ ಫಾದರ್ ಗ್ರೆಗರಿ ಪಿರೇರಾ, ಉಪಾಧ್ಯಕ್ಷರಾದ ಎಲಿಯಾಸ್ ಪಿರೇರಾ, ಕಾರ್ಯದರ್ಶಿ ಮೇರಿ ಡಿಸೋಜ, ಪ್ರಧಾನ ಧರ್ಮಭಗಿನಿ ಸಿಸ್ಟರ್ ನ್ಯಾನ್ಸಿ, ಎಲ್ಲಾ ವಾಳೆಯ ಗುರ್ಕಾರ್ ಮತ್ತು ಮಾಜಿ ಉಪಾಧ್ಯಕ್ಷರಾದ ರೋಷನ್ ಮಾರ್ಟಿಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!