ವಿಟ್ಲ: ಉಕ್ಕುಡ ಅಲ್ – ಮುರಾಫಖಃ 2k22 ವಿಜೃಂಭಣೆಯ ಸಮಾಪನೆ
ವಿಟ್ಲ: ಉಕ್ಕುಡ ಬದ್ರಿಯಾ ಜುಮಾ ಮಸೀದಿಯಲ್ಲಿ ಕಾರ್ಯಾಚರಿಸುತ್ತಿರುವ ಮುಹ್ಯಿಸ್ಸುನ್ನ ದರ್ಸ್ ಕಲಾ ಸಾಹಿತ್ಯ ಸ್ಪರ್ಧೆಗಳ ಸಮಾರೋಪ ಸಮಾರಂಭ ಅದ್ದೂರಿಯಾಗಿ ಜರಗಿತು.
ಅಲ್ ಮುರಾಫಖಃ ಎಂಬ ಶೀರ್ಷಿಕೆ ಅಡಿಯಲ್ಲಿ ಮೂರು ದಿನಗಳಿಂದ ವಿವಿಧ ನಾಲ್ಕು ವಿಭಾಗಗಳಾಗಿ ನೂರೈವತ್ತಕ್ಕೂ ಮಿಕ್ಕ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆಗಳು ಬಹಳ ಆಕರ್ಷಣೀಯ ರೀತಿಯಲ್ಲಿ ನಡೆದವು.
ಕಾರ್ಯಕ್ರಮದ ಕೇಂದ್ರ ಬಿಂದು ಕೇರಳದ ಪ್ರತಿಷ್ಠಿತ ವಿದ್ಯಾಸಂಸ್ಥೆ ಜಾಮಿಅಃ ಹಿಕಮಿಯ್ಯದ ಪ್ರಿನ್ಸಿಪಲ್ ಹಸನ್ ಬಾಖವಿ ಪಲ್ಲಾರ್ ಸೇರಿದ ಜನಸ್ತೋಮಕ್ಕೆ ಉಪದೇಶ ನೀಡಿದರು. ಹಾಫಿಲ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಅಲ್ ಹಿಕಮಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜಮೀಅತ್ ಫಲಾಹ್ ಬಂಟ್ವಾಳ ತಾಲೂಕಿನ ಅಧ್ಯಕ್ಷ ರಶೀದ್ ವಿಟ್ಲ, ಕರ್ನಾಟಕದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸುತ್ತಿರುವ ಮಸ್ದರ್‌ನ ಪ್ರಧಾನ ಕಾರ್ಯದರ್ಶಿ ಸುಫ್ಯಾನ್ ಸಖಾಫಿ,ವಕ್ಫ್ ಸಮಿತಿಯ ಸದಸ್ಯರಾದ ಸಿರಾಜುದ್ದೀನ್ ಸಖಾಫಿ ಕನ್ಯಾನ,ಮರ್ಕಝ್ ಕೈಕಂಬದ ಸಾರಥಿ ಬದ್ರುದ್ದೀನ್ ಅಝ್ಹರಿ, ಸುನ್ನೀ ಫೈಝಿ ಪೆರುವಾಯಿ, ಕರ್ನಾಟಕ ಜಂಇಯ್ಯತುಲ್ ಉಲಮಾ ಮಶಾವರ ಸದಸ್ಯರಾದ ಇಬ್ರಾಹಿಂ ಮದನಿ ಕಂಬಳಬೆಟ್ಟು, ಕುಪ್ಪೆಟ್ಟಿ ಮಸೀದಿಯ ಖತೀಬರಾದ ಹನೀಫ್ ಸಕಾಫಿ ಕಿನ್ಯ ರವರು ಸಂದೇಶವನ್ನು ನೀಡಿದರು.

ವೇದಿಕೆಯಲ್ಲಿ ಮಜ್ಲಿಸ್ ಗಾಣೆಮಾರ್ ಮುದರ್ರಿಸರಾದ ಹಾಫಿಳ್ ಮಜೀದ್ ಸಖಾಫಿ,ವಿಟ್ಲ ಝೋನ್ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಹಮೀದ್ ಸಖಾಫಿ ಪಾಡಿ, ನೂರುಲ್ ಹುದಾ ಎಜುಕೇಶನ್ ಕಾಂಪ್ಲೆಕ್ಸ್ ಒಕ್ಕೆತ್ತೂರು ಪ್ರಿನ್ಸಿಪಾಲ್ ಅಬ್ದುಲ್ ರಶೀದ್ ಸಖಾಫಿ ಮಂಗಳಪದವು, ಕಾನತ್ತಡ್ಕ ಖತೀಬರಾದ ಹಸನ್ ಅಹ್ಸನಿ ಕಾನತ್ತಡ್ಕ, ಶರೀಫ್ ಸಅದಿ, ಅಬ್ಬಾಸ್ ಮದನಿ, ಅಬ್ದುಲ್ ಹಮೀದ್ ಮದನಿ ಕಾನತ್ತಡ್ಕ ಬದ್ರಿಯಾ ಜುಮಾ ಮಸೀದಿ ಕಮಿಟಿ ಅಧ್ಯಕ್ಷರಾದ ಅಬ್ಬಾಸ್ ಹಾಜಿ ಟಿ ಎಚ್ ಎಂ ಎ, ಪ್ರಧಾನ ಕಾರ್ಯದರ್ಶಿ ಯು. ಶರೀಫ್ ತ್ವಯಿಬ, ಜಲಾಲಿಯ್ಯ ಕಮೀಟಿ ಅಧ್ಯಕ್ಷ ಹೈದರ್ ಉಕ್ಕುಡ,ಸ್ವಲಾತ್ ಕಮೀಟಿ ಅಧ್ಯಕ್ಷ ಮುನೀರ್ ದರ್ಬೆ, ಹಿದಾಯ ಫ್ರೆಂಡ್ಸ್ ಸದಸ್ಯರು,ಮುಂತಾದ ಹಲವಾರು ಉಲಮಾ, ಉಮರಾ, ನೇತಾರರು ಉಪಸ್ಥಿತರಿದ್ದರು.ನಝೀರ್ ಅಬ್ಬಾಸ್ ಸುರೈಜಿ ಅಲ್- ಮದೀನ ಮಂಜನಾಡಿ,
ಶಾಹುಲ್ ಹಮೀದ್ ಅಹ್ಸನಿ ಹೊನ್ನಾವರ,ನಿಝಾಂ ಖಾದ್ರಿ ಮಳಲಿ ದಕ್ಷಿಣ ಕನ್ನಡ ಸುನ್ನೀ ಸೆಂಟರ್ ಮೂಳೂರು, ಸಾಜಿದ್ ಸಖಾಫಿ ಹಿಮಮಿ ಅಲ್- ಖಾದಿಸ ಕಾವಳಕಟ್ಟೆ, ಶಾಕಿರ್ ಮುಈನಿ ಕುಪ್ಪೇಟಿ ಮರ್ಕಝುಸ್ಸಅದ ಶಿವಮೊಗ್ಗ ತೀರ್ಪುಗಾರರಾಗಿ ಕಾರ್ಯಾಚರಿಸಿದರು.






