ವಿಟ್ಲ: ಅಲ್ – ಮುರಾಫಖಃ 2k22 ಅದ್ದೂರಿಯ ಚಾಲನೆ ನೀಡಲಾಯಿತು
ವಿಟ್ಲ: ಉಕ್ಕುಡ ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದು ಬರುತ್ತಿರುವ ಮುಹ್ಯಿಸ್ಸುನ್ನ ದರ್ಸ್ ಮುತ ಅಲ್ಲಿಂ ವಿದ್ಯಾರ್ಥಿಗಳ ಕಲಾ ಸ್ಪರ್ಧೆಗೆ ದ್ವಜಾರೋಹಣ ಮಾಡುವ ಮೂಲಕ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುದರ್ರಿಸ್ ಹಾಫಿಳ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಅಲ್ – ಹಿಕಮಿ, ಸದರ್ ಮುಅಲ್ಲಿಂ ಹಮೀದ್ ಮದನಿ ಕಾನತ್ತಡ್ಕ, ಯಾಸೀನ್ ಸಅದಿ, ಅಬ್ದುಲ್ ಖಾದರ್ ಝುಹ್ರಿ,ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಟಿಎಚ್ ಎಂ ಎ ಅಬ್ಬಾಸ್ ಹಾಜಿ,ಕಾರ್ಯದರ್ಶಿ ಯು ಶರೀಫ್ ಉಕ್ಕುಡ, ಜಲಾಲಿಯ್ಯ ಕಮೀಟಿ ಅಧ್ಯಕ್ಷ ಹೈದರ್ ಉಕ್ಕುಡ, ಸ್ವಲಾತ್ ಕಮೀಟಿ ಅಧ್ಯಕ್ಷ ಮುನೀರ್ ದರ್ಬೆ, ಟಿಎಚ್ ಎಂ ಎ ಹಮೀದ್, ರಶೀದ್ ದರ್ಬೆ, ಅಬ್ದುರ್ರಹ್ಮಾನ್ ಜಿಮ್ಮ್ ,ಹಿದಾಯ ಫ್ರೆಂಡ್ಸ್ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮವು ದಿನಾಂಕ 23, 24,25ರಂದು ಮೂರು ದಿನಗಳ ಕಾಲ ನಡೆಯಲಿದೆ.
ಡಿಸೆಂಬರ್ 25 ರಂದು ಉಕ್ಕುಡ, ಕಾಜೂರು, ಬಜಾಲ್,ಕುಪ್ಪೆಟಿ, ಮಂಜ, ವೇಣೂರು ಮುಹ್ಯಿಸ್ಸುನ್ನ ಮುತಅಲ್ಲಿಮರ ಬೃಹತ್ ಕಲಾ ಸ್ಪರ್ಧೆಗಳು ನಡೆಯಲಿದೆ.
ಕಾರ್ಯಕ್ರಮದಲ್ಲಿ ಜಾಮಿಅ:ಹಿಕಮಿಯ್ಯಾ ಸಂಸ್ಥೆಯ ಪ್ರಧಾನ ಮುದರ್ರಿಸ್ ಮಲಪ್ಪುರಂ ಜಿಲ್ಲಾ ಮುಶಾವರ ಸದಸ್ಯರಾದ ‘ಹಸನ್ ಬಾಖವಿ ಪಲ್ಲಾರ್ ಚೆರಿಯೊ ಉಸ್ತಾದ್’ ಭಾಗವಹಿಸಲಿದ್ದಾರೆ.






