ಡಾ.ರಾಜ್‌ಕುಮಾರ್ ಕುಟುಂಬ ವಿರುದ್ಧ ವಿವಾದಾತ್ಮಕ ಹೇಳಿಕೆ: ಪುನೀತ್ ಕೆರೆಹಳ್ಳಿಗೆ ಕನ್ನಡಪರ ಸಂಘಟನೆಯಿಂದ ಹಲ್ಲೆ
ಬೆಂಗಳೂರು: ವರನಟ ಡಾ ರಾಜ್‌ಕುಮಾರ್ ಕುಟುಂಬ ವಿರುದ್ಧ ಹಗುರವಾಗಿ ಮಾತನಾಡಿದ ಸಂಘಪರಿವಾರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮೇಲೆ ಕನ್ನಡಪರ ಸಂಘಟನೆ ಹೋರಾಟಗಾರ ಶಿವಕುಮಾರ್ ಮತ್ತು ತಂಡ ಹಲ್ಲೆ ನಡೆಸಿದೆ.
ಚಾಮರಾಜಪೇಟೆಯಲ್ಲಿ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಪುನೀತ್ ಕೆರೆಹಳ್ಳಿಯನ್ನು ಅಡ್ಡಗಟ್ಟಿ ಶಿವಕುಮಾರ್ ಮತ್ತು ತಂಡದವರು ಬಟ್ಟೆ ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿಯತ್ತಿದ್ದಂತೆ ಚಾಮರಾಜಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.





