ವಿಟ್ಲ: ಕರ್ನಾಟಕ ಒನ್ ಸೇವಾ ಕೇಂದ್ರ ಉದ್ಘಾಟನೆ
ವಿಟ್ಲ: ವಿಟ್ಲದ ಅಡ್ಡದ ಬೀದಿಯಲ್ಲಿ ರಾಜ್ಯ ಸರಕಾರದ ಅಧೀನದ ಯೋಜನೆಯಾದ ಕರ್ನಾಟಕ ಒನ್ ಸೇವಾ ಕೇಂದ್ರ ಅಬ್ದುಲ್ ನಾಸೀರ್ ಕುರುಂಬಳ ಅವರ ನೇತೃತ್ವದಲ್ಲಿ ಶುಭಾರಂಭಗೊಂಡಿತು.
ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.
ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಎಚ್ ಇ ನಾಗರಾಜ್, ಬಂಟ್ವಾಳ ಜಂಇಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಕಾಂಗ್ರೇಸ್ ಮುಖಂಡ ಕಾವು ಹೇಮನಾಥ ಶೆಟ್ಟಿ, ವಿಟ್ಲ ಗ್ರಾಮ ಕರಣಿಕ ಸತೀಶ್ ಸುವರ್ಣ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ವಿ.ಕೆ.ಎಂ ಅಶ್ರಪ್, ಅಶೋಕ್ ಕುಮಾರ್ ಶೆಟ್ಟಿ, ಸಮಾಜಿಕ ಅಬೂಬಕ್ಕರ್ ಅನಿಲಕಟ್ಟೆ, ಶಾಕೀರ್ ಅಳಕೆಮಜಲು, ಹನೀಫ್ ಬಗ್ಗುಮೂಲೆ, ಶಮೀರ್ ಪಳಿಕೆ, ಶಂಸುದ್ದೀನ್ ಅಜ್ಜಿನಡ್ಕ, ಪ್ರಮುಖರಾದ ಹಸೈನಾರ್ ಕುರುಂಬಳ, ಕೆ.ಪಿ ಇಸ್ಮಾಯಿಲ್ ಕುರುಂಬಳ, ನವಾಝ್, ನೌಸೀರ್, ಜಮಾಲ್, ನೌಶಾದ್, ಆಶೀಕ್, ಫಯಾಜ್ ಮೊದಲಾದವರು ಉಪಸ್ಥಿತರಿದ್ದರು.









