ತುಮಕೂರು: ವಾಚ್ ಮ್ಯಾನ್ ನನ್ನು ಕೊಲೆಗೈದು ಬ್ಯಾಂಕ್ ದರೋಡೆ
ತುಮಕೂರು: ಬ್ಯಾಂಕ್ ವೊಂದರ ವಾಚ್ ಮ್ಯಾನ್ ನನ್ನು ಭೀಕರವಾಗಿ ಕೊಲೆಗೈದು ದರೋಡೆ ಮಾಡಿರುವ ಘಟನೆ ಘಟನೆ ತುಮಕೂರಿನ ನಾಗವಲ್ಲಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ
ಸಿದ್ದಪ್ಪ (55) ಕೊಲೆ ಆದ ದುರ್ದೈವಿ. ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ವಾಚ್ ಮ್ಯಾನ್ ನಾಗಿ ಕೆಲಸ ಮಾಡುತ್ತಿದ್ದ ಸಿದ್ದಪ್ಪರನ್ನು ದುಷ್ಕರ್ಮಿಗಳು ದರೋಡೆ ಮಾಡುವ ಉದ್ದೇಶದಿಂದ ಕೊಲೆಗೈದು ಸೊಸೈಟಿಯಲ್ಲಿದ್ದ ಹಣ, ಒಡವೆ ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಸ್ಥಳಕ್ಕೆ ತುಮಕೂರು ಜಿಲ್ಲಾ ಎಎಸ್ ಪಿ ರಾಹುಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತುಮಕೂರು ಶ್ವಾನ ದಳದಿಂದ ಸುಳಿವು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ.





