ಉಡುಪಿ: ಮನೆ ಹಿಂಬಾಗಿಲು ಮುರಿದು ಕಳ್ಳತನ: 3.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿ
ಉಡುಪಿ: ಉಡುಪಿಯ ಶಿವಳ್ಳಿ ಗ್ರಾಮ ಕುಂಜಿಬೆಟ್ಟು ಬಳಿ ಬೀಗ ಹಾಕಿದ್ದ ಮನೆಯ ಹಿಂಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಡೈಮಂಡ್ ಹಾಗೂ ಚಿನ್ನದ ಆಭರಣ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಡಿ.11ರ ರಾತ್ರಿ 9 ಗಂಟೆಯಿಂದ ಡಿ. 12 ಬೆಳಿಗ್ಗೆ9 ಗಂಟೆ ನಡುವೆ ಯಾರೂ ಇಲ್ಲದೆ ಇರುವ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹಿಂಬಾಗಿಲಿನ ಮೂಲಕ ಒಳಪ್ರವೇಶಿಸಿ ಕಳ್ಳತನವೆಸಗಿದ್ದಾರೆ ಎಂದು ಕುಂಜಿಬೆಟ್ಟು ನಿವಾಸಿ ವೈಷ್ಣವಿ ಆಚಾರ್ಯ (50) ದೂರು ನೀಡಿದ್ದಾರೆ.
ಕಳ್ಳರು ರೂಮ್ ನಲ್ಲಿದ್ದ ಅಲ್ಮೇರಾ ಬಾಗಿಲನ್ನು ಮುರಿದು ತೆಗೆದು, ಗೋದ್ರೇಜ್ ಲಾಕರ್ ನಲ್ಲಿದ್ದ ಡೈಮಂಡ್ ಉಂಗುರ-1, 20 ಗ್ರಾಂ ತೂಕದ ಚಿನ್ನದ ಜುಮುಕಿ-2, 8 ಗ್ರಾಂ ತೂಕದ ಚಿನ್ನದ ಕಾಯಿನ್-1, ಬೆಳ್ಳಿಯ ತಟ್ಟೆಗಳು-2, ಚಿನ್ನದ ಲೇಪನ ಇರುವ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ 3,48,000 ಆಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.




