August 13, 2026

ವಿಟ್ಲ: ಜೆಸಿಐ ವಿಟ್ಲ ಘಟಕಕ್ಕೆ 2023 ಸಾಲಿನ ಪರಮೇಶ್ವರ ಹೆಗಡೆ ಸಾರಥ್ಯ: ಡಿ.18ರಂದು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0
IMG-20221212-WA0070.jpg

ಅಂತರಾಷ್ಟ್ರೀಯ ಸಂಸ್ಥೆ ಜೆಸಿಐನ ವಲಯ 15 ರ ಪ್ರತಿಷ್ಠಿತ ಘಟಕ ಜೆಸಿಐ ವಿಟ್ಲದ 2023 ನೇ ಸಾಲಿನ ಅಧ್ಯಕ್ಷರಾಗಿ ನಿಯೋಜಿತರಾದ JFD ಪರಮೇಶ್ವರ ಹೆಗಡೆ,ಕಾರ್ಯದರ್ಶಿ JFM ದೀಕ್ಷಿತ್ ಜಿ. ,ಕೋಶಾಧಿಕಾರಿ JFM ರಿತೇಶ್ ಶೆಟ್ಟಿ ಹಾಗೂ ಉಳಿದ ಪದಾಧಿಕಾರಿಗಳ ‘ಪದಗ್ರಹಣ ಕಾರ್ಯಕ್ರಮ’ ಇದೇ ದಿನಾಂಕ 18 ಡಿಸೆಂಬರ್ ರಂದು ವಿಟ್ಲದ ‘ಲಯನ್ ಸೇವಾ ಭವನ,ಸಿಂಹಗಿರಿ ಒಕ್ಕೆತ್ತೂರು’ಇಲ್ಲಿ ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಖ್ಯಾತ ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿಗಳೂ, ಉಡುಪಿ ಕಲ್ಮಾಡಿಯASEMS ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಪವನ್ ಕುಮಾರ್ ಕಿರಣ್ ಕೆರೆ, ವಲಯ 15 ರ ನೂತನ ವಲಯಾಧ್ಯಕ್ಷರಾದ JFD ಪುಷೋತ್ತಮ್ ಶೆಟ್ಟಿ ಭಾಗವಹಿಸಲಿದ್ದಾರೆ.ಹಾಗೂ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ವಲಯ 15 ರ ನೂತನ ವಲಯ ಉಪಾಧ್ಯಕ್ಷರಾದ JC HGF ಅಜೀತ್ ಕುಮಾರ್ ರೈ ರವರು ಉಪಸ್ಥಿತರಿರಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!