March 20, 2026

ಮಂಗಳೂರು: ಚಿನ್ನದ ಶೋ ರೂಮಿಗೆ ನುಗ್ಗಿ ಅನ್ಯಕೋಮಿನ ಯುವಕನಿಗೆ ಹಲ್ಲೆ: ಅನ್ಯಕೋಮಿನ ಯುವತಿ ಜತೆ ಮಾತನಾಡಿದ ವಿಚಾರವಾಗಿ ಹಲ್ಲೆ ಆರೋಪ

0
IMG-20221206-WA0023.jpg

ಮಂಗಳೂರು: ಚಿನ್ನದ ಶೋರೂಮಿಗೆ ನುಗ್ಗಿದ ಸಂಘಪರಿವಾರ ಕಾರ್ಯಕರ್ತರು ರಜೆಯಲ್ಲಿದ್ದ ಸಿಬ್ಬಂದಿಯನ್ನು ಎಳೆದುಕೊಂಡು ಬಂದು ಮಳಿಗೆಯ ಒಳಗೆ ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಕಂಕನಾಡಿಯಲ್ಲಿ ನಡೆದಿದೆ.

ಮಂಗಳವಾರ ಸಂಘಪರಿವಾರ ಕಾರ್ಯಕರ್ತರ ತಂಡವೊಂದು ಕಂಕನಾಡಿ ಬಳಿ ಇರುವ ಚಿನ್ನದ ಶೋರೂಮ್ ಒಂದಕ್ಕೆ ಏಕಾಏಕಿ ನುಗ್ಗಿ ದಾಂಧಲೆ ನಡೆಸಿದೆ. ಈ ತಂಡ ರಜೆಯಲ್ಲಿದ್ದ ಸಿಬ್ಬಂದಿಯನ್ನು ಎಳೆದು ತಂದು ಶೋರೂಮ್ ಒಳಗೆ ಯದ್ವಾತದ್ವ ಥಳಿಸಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಲ್ಲೆಗೀಡಾದ ಸಿಬ್ಬಂದಿ ಮುಸ್ಲಿಮನಾಗಿದ್ದು, ತನ್ನ ಸಹೋದ್ಯೋಗಿಯಾಗಿರುವ ಅನ್ಯಮತೀಯ ಯುವತಿಯ ಜೊತೆ ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಕದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಶೋರೂಮ್ ಸಿಬ್ಬಂದಿಯನ್ನು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ. ಈ ಬಗ್ಗೆ ಶೋರೂಮ್ ಆಡಳಿತ ಮಂಡಳಿಯವರು ಯಾವುದೇ ದೂರು ನೀಡಿಲ್ಲ.

Leave a Reply

Your email address will not be published. Required fields are marked *

error: Content is protected !!