March 20, 2026

ಶ್ವಾನದೊಂದಿಗೆ ಬೈಕ್‌ನಲ್ಲಿ ಮಂಟಪಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ವರ!

0
IMG-20221206-WA0037.jpg

ನವದೆಹಲಿ: ಮದುವೆ ಮಂಟಪಕ್ಕೆ ಈಗ ಬೇರೆ ಬೇರೆ ರೀಯಿಯಲ್ಲಿ ಎಂಟ್ರಿ ಕೊಡುವುದು ಹೊಸ ಟ್ರೆಂಡ್. ಆದರೆ ಇಲ್ಲೊಬ್ಬ ವರ ತನ್ನ ಮುದ್ದಿನ ಸಾಕುನಾಯಿಯನ್ನು ಬೈಕೇರಿಸಿಕೊಂಡು ಮದುವೆ ಮಂಟಪಕ್ಕೆ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾನೆ.

ಸಾಕುನಾಯಿಗಳು ಮಾಲಕರ ಅತ್ಯುತ್ತಮ ಸ್ನೇಹಿತರು ಎಂಬ ಮಾತಿದೆ. ಅಂತೆಯೇ ತನ್ನ ಮುದ್ದಿನ ಸಾಕುನಾಯಿಗೆ ಈ ವರ ತನ್ನ ಮದುವೆಯಲ್ಲಿ ಅತ್ಯಂತ ದೊಡ್ಡ ಸ್ಥಾನವನ್ನೇ ನೀಡಿದ್ದಾನೆ. ಶ್ವಾನಕ್ಕೆ ಹೊಸ ಬಟ್ಟೆ ತೊಡಿಸಿ ತನ್ನ ಬೈಕಿನಲ್ಲಿ ಮುಂಭಾಗದಲ್ಲಿ ಕೂರಿಸಿ ಈ ವರ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾನೆ.

ದರ್ಶನ್ ನಂದು ಪಾಲ್ ಎಂಬ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಈ ವೀಡಿಯೋವನ್ನು ಪೋಸ್ಟ್‌ ಮಾಡಿದ್ದು, ವರನ ಸ್ಟೈಲ್ ಮತ್ತು ಶ್ವಾನಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ‌ಆದರೆ ಇದು ಅವರದ್ದೇ ಮದುವೆಯ ವೀಡಿಯೋ ಅಥವಾ ಇತರರದ್ದಾ ಎಂಬುದು ಗೊತ್ತಾಗಿಲ್ಲ. ವೀಡಿಯೋದಲ್ಲಿ ವರ ಶೆರ್ವಾಣಿ ಧರಿಸಿದ್ದು, ಮುದ್ದಿನ ಶ್ವಾನಕ್ಕೂ ವೈನ್ ಕಲರ್‍ ಶೆರ್ವಾಣಿಯನ್ನು ಹಾಕಲಾಗಿದೆ. ’ಲೈಕ್ ಬಾಸ್’ ಎಂಬ ಶೀರ್ಷಿಕೆಯನ್ನು ವೀಡಿಯೋಗೆ ನೀಡಲಾಗಿದೆ.

ಇನ್ನು ವೀಡಿಯೋಗೆ 1.7 ಮಿಲಿಯನ್ ವ್ಯೂ, 2 ಲಕ್ಷ ಲೈಕ್ಸ್ ಬಂದಿದ್ದು, ಹಲವರು ಈ ವೀಡಿಯೋವನ್ನು ಇಷ್ಟಪಟ್ಟು ಕಮೆಂಟ್ ಮಾಡಿದ್ದಾರೆ. ‌ಎಲ್ಲರೂ ನಿಮ್ಮಂತೆಯೇ ಶ್ವಾನ ಪ್ರೀತಿ ಹೊಂದಬೇಕು ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಇನ್ನೊಬ್ಬರು ವರನಿಗಿಂತಲೂ ಶ್ವಾನ ಮುದ್ದಾಗಿ ಕಾಣುತ್ತಿದೆ ಎಂದು ತಮಾಷೆಯ ಕಮೆಂಟ್ ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!