February 3, 2026

ಗಂಗೊಳ್ಳಿ: ಮೀನು ಖಾಲಿ ಮಾಡುತ್ತಿದ್ದಾಗ ಆಯತಪ್ಪಿ ನದಿಗೆ ಬಿದ್ದು ಮೀನುಗಾರ ಸಾವು

0
image_editor_output_image600992931-1669971805996.jpg

ಗಂಗೊಳ್ಳಿ: ಆಳ ಮೀನುಗಾರಿಕೆ ನಡೆಸಿ ಬಂದು ಮೀನು ಖಾಲಿ ಮಾಡುತ್ತಿದ್ದ ವೇಳೆ ಆಯತಪ್ಪಿ ನದಿಗೆ ಬಿದ್ದು ಮೀನುಗಾರ ಸಾವನ್ನಪ್ಪಿದ ಘಟನೆ ಗಂಗೊಳ್ಳಿಯ ಪಂಚಗಂಗಾವಳಿ ನದಿಯಲ್ಲಿ ನಡೆದಿದೆ.

ಮೃತ ಮೀನುಗಾರನನ್ನು ಒರಿಸ್ಸಾ ಮೂಲದ ಪ್ರಮೋದ್ ಮಿನ್ಜ್ (32) ಎಂದು ಗುರುತಿಸಲಾಗಿದೆ. ಮಂಗಳವಾರ ಪ್ರಭಾಕರ ಖಾರ್ವಿ ಮಾಲಕತ್ವದ ಶ್ರೀ ಯಕ್ಷೇಶ್ವರಿ ಬೋಟ್‌ನಲ್ಲಿ ಆನಂದ ತರಕ್ಕಿ, ಪ್ರಮೋದ್ ಮಿನ್ನ, ಪ್ರಮೋದ್ ತೋಪು ಮತ್ತಿತರರು ಆಳ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ಮುಗಿಸಿ ಗಂಗೊಳ್ಳಿ ಗ್ರಾಮದ ಗಂಗೊಳ್ಳಿ ಬಂದರು ಬಳಿ ಪಂಚಗಂಗಾವಳಿ ನದಿಯಲ್ಲಿ ಬೋಟನ್ನು ನಿಲ್ಲಿಸಿ ಬೋಟ್‌ನಿಂದ ಮೀನು ಖಾಲಿ ಮಾಡುತ್ತಿರುವಾಗ ಪ್ರಮೋದ ಮಿನ್ಜ್‌ ಆಕಸ್ಮಿಕವಾಗಿ ಆಯಾತಪ್ಪಿ ಬೋಟ್‌ನಿಂದ ಪಂಚಗಂಗಾವಳಿ ನದಿಯ ನೀರಿಗೆ ಬಿದ್ದು ಕಾಣೆಯಾಗಿದ್ದರು.

ನದಿಗೆ ಬಿದ್ದ ಪ್ರಮೋದ್ ಅವರ ಪತ್ತೆಗಾಗಿ ಕಳೆದ ನಾಲ್ಕು ದಿನಗಳಿಂದ ತೀವ್ರ ಹುಡುಕಾಟ ನಡೆಸಲಾಗಿತ್ತು. ಇಂದು ಬೆಳಗ್ಗೆ ಅವರ ಮೃತದೇಹ ಪತ್ತೆಯಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!