March 20, 2026

ಎರಡು ಬಾರಿ ಕ್ಯಾನ್ಸರ್‌ ಗೆದ್ದಿದ್ದ 24 ವರ್ಷದ ಬೆಂಗಾಲಿ ನಟಿ ಹೃದಯ ಸ್ತಂಭನದಿಂದ ಮೃತ್ಯು
  

0
hr-sharma.jpg

ಕೋಲ್ಕತ್ತ: ಎರಡು ಬಾರಿ ಕ್ಯಾನ್ಸರ್‌ ಗೆದ್ದು ಚೇತರಿಕೆಯಾಗಿದ್ದ ಬೆಂಗಾಲಿ ಸಿನಿಮಾರಂಗದ ಖ್ಯಾತ ನಟಿ ಆಯಂಡ್ರಿಲಾ ಶರ್ಮಾ (24) ಅವರು ಇಂದು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.

ಆಯಂಡ್ರಿಲಾ ಶರ್ಮಾ ಅವರು ಇತ್ತೀಚೆಗೆ ಪಾರ್ಶ್ವವಾಯುವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇದೀಗ ನಟಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಇನ್ನು ಆಯಂಡ್ರಿಲಾ ಶರ್ಮಾ ಬೆಂಗಾಲಿ ಸಿನಿಮಾರಂಗದಲ್ಲಿ ಜನಪ್ರಿಯ ಹೆಸರು. ‘ಜುಮೂರ್’, ‘ಭೋಲೋ ಬಾಬಾ ಪರ್ ಕರೇಗಾ’ ಸಿನಿಮಾಗಳು ಬೆಂಗಾಲಿ ಬಣ್ಣದ ಲೋಕದಲ್ಲಿ ಆಯಂಡ್ರಿಲಾ ಅವರಿಗೆ ಹೆಸರು ತಂದು ಕೊಟ್ಟಿತ್ತು.
ಶರ್ಮಾಗೆ ಚಿಕ್ಕ ವಯಸ್ಸಿನಲ್ಲಿಯೇ ಕ್ಯಾನ್ಸರ್‌ ಕಂಡುಬಂದಿದ್ದು, ಸಮಯದಲ್ಲಿ ಚಿಕಿತ್ಸೆ ಪಡೆದ ಪರಿಣಾಮ ಕ್ಯಾನ್ಸರ್‌ ನಿಂದ ಆಯಂಡ್ರಿಲಾ ಹೊರ ಬಂದಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ ಮೇಲೆ ಅವರಿಗೆ ಮತ್ತೊಮ್ಮೆ ಕ್ಯಾನ್ಸರ್‌ ಕಂಡುಬಂದು ಮತ್ತೆ ಆಪರೇಷನ್‌ ಮೂಲಕ ಕ್ಯಾನ್ಸರ್‌ ಗೆಡ್ಡೆ ತೆಗೆದು ಯಶಸ್ವಿಯಾಹಿದ್ದರು.

Leave a Reply

Your email address will not be published. Required fields are marked *

error: Content is protected !!