ಆಂಧ್ರಪ್ರದೇಶ: ಜಕ್ಕುವ ಗ್ರಾಮದಲ್ಲಿ 30 ಗುಡಿಸಲುಗಳು ಬೆಂಕಿಗಾಹುತಿ
ಆಂಧ್ರ ಪ್ರದೇಶ: ವಿಜಯನಗರ ಜಿಲ್ಲೆಯ ಮೆಂಟಡಾ ಮಂಡಲದ ಆಂಧ್ರಪ್ರದೇಶದ ಜಕ್ಕುವ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಬೆಂಕಿಯಲ್ಲಿ 30 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ.
ಸಿಲಿಂಡರ್ ಸ್ಫೋಟದ ನಂತರ ಅನಿಲ ಸೋರಿಕೆಯಿಂದಾಗಿ ಬೆಂಕಿ ಸಂಭವಿಸಿರಬಹುದು ಮತ್ತು ಎರಡು ರಸ್ತೆಗಳಲ್ಲಿರುವ ಮನೆಗಳು ನಾಶವಾದವು. ಬೆಂಕಿಯನ್ನು ಹತೋಟಿಗೆ ತರಲಾಗಿದ್ದು, ಅಪಘಾತದಲ್ಲಿ ಮನೆ, ಆಸ್ತಿ ಕಳೆದುಕೊಂಡವರಿಗೆ ಸ್ಥಳೀಯ ಶಾಲೆಯಲ್ಲಿ ವಸತಿ ಕಲ್ಪಿಸಲಾಗಿದೆ.
ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಹೊತ್ತಿಕೊಂಡ ಬೆಂಕಿ ವೇಗವಾಗಿ ಒಂದಾದ ಬಳಿಕ ಒಂದು ಗುಡಿಸಲುಗಳಿಗೆ ಹಬ್ಬಿದೆ. ಸದ್ಯ ಈ ದುರ್ಘಟನೆಯಲ್ಲಿ ಆದ ಜೀವ ಹಾನಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಆ 30 ಗುಡಿಸಲುಗಳಲ್ಲಿ ವಾಸವಾಗಿದ್ದ ಜನರಿಗೆ ಮನೆ ನಾಶವಾದಂತಾಗಿದೆ. ಅದರಲ್ಲಿದ್ದ ಸಾಮಗ್ರಿಗಳೆಲ್ಲ ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ. ಸದ್ಯ ಸ್ಥಳದಲ್ಲಿ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.





