ಸುಬ್ರಹ್ಮಣ್ಯ: ಮೀನು ಹಿಡಿಯಲು ತೆರಳಿದ ಯುವಕರಿಬ್ಬರು ಹೊಳೆಗೆ ಬಿದ್ದು ಸಾವು
ಸುಬ್ರಹ್ಮಣ್ಯ: ಮೀನು ಹಿಡಿಯಲು ತೆರಳಿದ ಯುವಕರಿಬ್ಬರು ಹೊಳೆಗೆ ಬಿದ್ದು ಸಾವನ್ನಪ್ಪಿದ ಘಟನೆ ಸುಬ್ರಹ್ಮಣ್ಯ ಏನೆಕಲ್ಲಿನಲ್ಲಿ ನಡೆದಿದೆ.
ಮೃತರನ್ನು ಧರ್ಮಪಾಲ, ಬೆಳಿಯಪ್ಪ ಎಂದು ಗುರುತಿಸಲಾಗಿದೆ.
ನಿನ್ನೆ ಧರ್ಮಪಾಲ, ಬೆಳಿಯಪ್ಪ ಮೀನು ಹಿಡಿಯಲು ತೆರಳಿದ್ದು, ಈ ವೇಳೆ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದರು ಇಂದು ಇಬ್ಬರ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..




