March 20, 2026

ಖಂಡಾಲಾ ಘಾಟ್ ಬಳಿ ಮೀನಿನ ಲಾರಿ ಅಪಘಾತ: ಕೃಷ್ಣಾಪುರದ ಯುವಕ ಮೃತ್ಯು

0
image_editor_output_image38699678-1668528535244.jpg

ಮಂಗಳೂರು: ನಗರದಿಂದ ಮುಂಬೈಗೆ ಹೋಗುತ್ತಿದ್ದ ಮೀನಿನ ಲಾರಿಯೊಂದು ಖಂಡಾಲಾ ಘಾಟ್ ಬಳಿ ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಲಾರಿ ಚಾಲಕ ಇಲ್ಲಿನ ಕೃಷ್ಣಾಪುರದ ಯುವಕನೊಬ್ಬ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಕೃಷ್ಣಾಪುರ ನಿವಾಸಿ ಅಲ್ತಾಫ್ ಹುಸೇನ್ ಅವರ ಪುತ್ರ ಅಜ್ಮಲ್ (23) ಮೃತಪಟ್ಟ ಲಾರಿ ಚಾಲಕ. ಕುಂದಾಪುರ ಮೂಲದ ಲಾರಿಯಲ್ಲಿ ನಿನ್ನೆ ರಾತ್ರಿ ಅಜ್ಮಲ್ ಚಾಲಕನಾಗಿ ಮುಂಬೈಗೆ ತೆರಳಿದ್ದು, ಇಂದು ಖಂಡಾಲಾ ಘಾಟ್ ನಲ್ಲಿ ಲಾರಿ ಉರುಳಿಬಿದ್ದಿದೆ. ಚಾಲಕ ಅಜ್ಮಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಚಾಲಕ ಕಾಪು ನಿವಾಸಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಕುಟುಂಬದ ಸದಸ್ಯರು ಘಟನಾ ಸ್ಥಳಕ್ಕೆ ತೆರಳಿದ್ದು, ನಾಳೆ ಮೃತದೇಹ ಊರಿಗೆ ತಂದು ಕೃಷ್ಣಾಪುರ ಖಬರಸ್ತಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸುವ ಸಾಧ್ಯತೆ ಇದೆ.

ಅಲ್ತಾಫ್ ಹುಸೇನ್ ಕೂಡ ಲಾರಿ ಚಾಲಕರಾಗಿದ್ದು, ಅವರಿಗೆ ಇಬ್ಬರು ಪುತ್ರರು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!