ಉಡುಪಿ: ಕಡಲ ತೀರಕ್ಕೆ ಅಪ್ಪಳಿಸಿದ ಮೀನುಗಾರಿಕಾ ಬೋಟ್
ತೆಕ್ಕಟ್ಟೆ ಕೊಮೆ : ಚಾಲಕನ ನಿಯಂತ್ರಣ ತಪ್ಪಿದ ಮೀನುಗಾರಿಕಾ ಬೋಟೊಂದು ಕಡಲ ತೀರಕ್ಕೆ ಬಂದು ಅಪ್ಪಳಿಸಿದ ಘಟನೆ ಸೋಮವಾರ ತಡರಾತ್ರಿ 1 ಗಂಟೆ ಸುಮಾರಿಗೆ ನಡೆದಿದೆ
ಗಂಗೊಳ್ಳಿ ಮೂಲದ ಬೋಟ್ ಎನ್ನಲಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಬೋಟಿನಲ್ಲಿ ಸುಮಾರು ೬ ಮಂದಿ ಮೀನುಗಾರರಿದ್ದರು ಎಂದು ಹೇಳಲಾಗಿದೆ.
ಬೋಟ್ ಸುರಕ್ಷಿತವಾಗಿ ನೀರಿನಿಂದ ಮೇಲೆತ್ತುವ ನಿಟ್ಟಿನಿಂದ ಬೋಟ್ ಒಳಗಿನ ಸರಕುಗಳನ್ನು ಹೊರ ತೆಗೆಯುವಲ್ಲಿ ಮೀನುಗಾರರು ಶ್ರಮಿಸುತ್ತಿದ್ದಾರೆ.




