May 17, 2026

ಯಂತ್ರಕ್ಕೆ ಸಿಲುಕಿ ಜಜ್ಜಿ ತುಂಡಾಗಿ ಬೇರ್ಪಟ್ಟ ಕೈಯನ್ನು ಮರುಜೋಡನೆ ಮಾಡಿ ಹಾಸನದಲ್ಲಿ ಎರಡನೇ ದಾಖಲೆ ಬರೆದ ಜನಪ್ರಿಯ ಆಸ್ಪತ್ರೆ
: ವಿಟ್ಲದ ಡಾ. ಅಬ್ದುಲ್ ಬಶೀರ್ ವಿ.ಕೆ ಅವರ ನೇತೃತ್ವದಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ

0
image_editor_output_image864692507-1668260815720

ಯಂತ್ರಕ್ಕೆ ಸಿಲುಕಿ ಜಜ್ಜಿ ತುಂಡಾಗಿ ಬೇರ್ಪಟ್ಟ ಕೈಯನ್ನು ಮರುಜೋಡನೆ ಮಾಡಿ ಹಾಸನದಲ್ಲಿ ಎರಡನೇ ದಾಖಲೆ ಬರೆದ ಜನಪ್ರಿಯ ಆಸ್ಪತ್ರೆ
: ವಿಟ್ಲದ ಡಾ. ಅಬ್ದುಲ್ ಬಶೀರ್ ವಿ.ಕೆ ಅವರ ನೇತೃತ್ವದಲ್ಲಿ  ಯಶಸ್ವಿ ಶಸ್ತ್ರ ಚಿಕಿತ್ಸೆ

ಹಾಸನ: ಇತ್ತೀಚೆಗೆ
19 ವರ್ಷದ ಮನೀಶ್ ಎಂಬ ಹುಡುಗನ ಕೈ ತೆಂಗಿನ ನಾರು ತೆಗೆಯುವ ಯಂತ್ರಕ್ಕೆ ಸಿಲುಕಿಕೊಂಡು ಜಜ್ಜಿ ತುಂಡಾಗಿ ಬೇರ್ಪಟ್ಟ ಸಮಯದಲ್ಲಿ  ತುರ್ತು ಚಿಕಿತ್ಸೆಗಾಗಿ ಹಾಸನದ ಜನಪ್ರಿಯ ಆಸ್ಪತ್ರೆಗೆ ಬಂದಿದ್ದರು.
ಬರುವಾಗ ಅವರಿಗೆ ತೀವ್ರ ರಕ್ತಸ್ರಾವವಾಗಿ ರಕ್ತದ ಒತ್ತಡ( B P ) ತುಂಬಾ ಕಡಿಮೆ ಇದ್ದದ್ದರಿಂದ ಹೃದಯಕ್ಕೆ ಪೈಪು ಹಾಕಿ ರಕ್ತವನ್ನು ಪೂರೈಸಿ, ಜೀವವನ್ನು ಉಳಿಸಲಾಯಿತು.‌
ಬಲಗೈ ಜಜ್ಜಿ ತೋಳಿನಿಂದ ಬೇರ್ಪಟ್ಟು  ಚರ್ಮದಿಂದ ನೇತಾಡುತ್ತಿತ್ತು ತಕ್ಷಣವೇ ಗಾಯಾಳುವಿನ ಕಡೆಯವರಿಗೆ ಗಾಯದ ತೀವ್ರತೆಯನ್ನು ವಿವರಿಸಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು.  ಸುಮಾರು ಏಳರಿಂದ ಎಂಟು ಗಂಟೆಗಳ ಕಾಲ  ಜನಪ್ರಿಯ ಆಸ್ಪತ್ರೆಯ ಕೀಲು ಮತ್ತು ಮೂಳೆ ತಜ್ಞರಾದ ಡಾ. ಅಬ್ದುಲ್ ಬಶೀರ್ ವಿಕೆ ಅವರ ನೇತೃತ್ವದಲ್ಲಿ   ಕೀಲು ಮತ್ತು ಮೂಳೆ ಶಸ್ತ್ರ ಚಿಕಿತ್ಸೆ ಹಾಗೂ ಕೀಲು  ಬದಲಾವಣೆ  ತಜ್ಞರಾದ ಡಾ” ರಜತ್ ಎಸ್ ಓ , ಅರವಳಿಕೆ ತಜ್ಞರಾದ ಡಾ” ಲಿಂಗರಾಜು ,ಸರ್ಜನ್ ಡಾ” ಪ್ರವೀಣ್  ಮತ್ತು ಡಾ. ಲೋಹಿತ್ ರವರು  ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದರು
ಶಸ್ತ್ರಚಿಕಿತ್ಸೆ ಮಾಡಿದ ನಂತರ ರಕ್ತನಾಳ ಸ್ಕ್ಯಾನಿಂಗ್ ಮಾಡಲಾಗಿ ಸ್ಕ್ಯಾನಿಂಗ್ ನಲ್ಲಿ  ರಕ್ತ ಚಲನೆ ಕಂಡು ಬಂತು   ಆರು ಗಂಟೆಯ ನಂತರ ಗಾಯಾಳು ಕೈ ಬೆರಳನ್ನು ಆಡಿಸಲು ಶುರು ಮಾಡಿದರು.‌
ಈ ಶಸ್ತ್ರಚಿಕಿತ್ಸೆಯನ್ನು ಜನಪ್ರಿಯ ಆಸ್ಪತ್ರೆಯ ತಂಡ ಎರಡನೇ ಬಾರಿ ಮಾಡಿ ಯಶಸ್ವಿಯಾಗಿ ಮತ್ತೊಂದು ದಾಖಲೆ  ಹಾಸನ ಜಿಲ್ಲೆಯಲ್ಲಿ ಮಾಡಿದೆ
ಗಾಯಾಳು ಶೀಘ್ರದಲ್ಲೇ ಗುಣಮುಖರಾಗಲಿದ್ದು ಮೂರು ತಿಂಗಳ ನಂತರ ಎಂದಿನಂತೆ ಕೆಲಸ ಕಾರ್ಯಗಳಲ್ಲಿತೊಡಗಿಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!